ಬೆಳಗಾವಿ ಬಾರ್ ಅಸೋಸಿಯೇಷನ್ ಅಧ್ಯಕ್ಷರ ಸನ್ನದು ಶಾಶ್ವತ ರದ್ದು

0
14

ಬೆಳಗಾವಿ: ಬೆಳಗಾವಿ ಬಾರ್ ಅಸೋಸಿಯೇಷನ್ ಅಧ್ಯಕ್ಷ ಪ್ರಭು ಯತ್ನಟ್ಟಿ, ಕಕ್ಷಿದಾರನ ಲಕ್ಷಾಂತರ ರೂ. ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರ ಪರಿಷತ್ತಿನ ಶಿಸ್ತು ಸಮಿತಿ ಮಹತ್ವದ ತೀರ್ಪು ನೀಡಿದೆ.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಸ್ವಾಧೀನವಾದ ಜಮೀನಿಗೆ ಪರಿಹಾರ ಕೊಡಿಸಿ ಎಂದು ಕೋರ್ಟ್ ಮೆಟ್ಟಿಲೇರಿದ್ದ ರೈತನಿಗೆ ವಕೀಲರೊಬ್ಬರು ಲಕ್ಷಾಂತರ ರೂ.ವಂಚಿಸಿದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ವಕೀಲರ ಪರಿಷತ್ತಿನ ಶಿಸ್ತು ಸಮಿತಿಯು ತಪ್ಪಿತಸ್ಥ ವಕೀಲ ಪ್ರಭು ಯತ್ನಟ್ಟಿ ಅವರ ಸನ್ನದು ಶಾಶ್ವತವಾಗಿ ರದ್ದುಗೊಳಿಸಿ ಜೂ. 19ರಂದು ಆದೇಶ ಹೊರಡಿಸಿದೆ. ಬೆಳಗಾವಿ ಬಾರ್ ಅಸೋಸಿಯೇಷನ್ ಅಧ್ಯಕ್ಷ ಪ್ರಭು ಯತ್ನಟ್ಟಿ ವಂಚಿಸಿರುವ ಆರೋಪ ಎದುರಿಸುತ್ತಿರುವರು. ಖಾನಾಪುರದ ಸುಭಾಷ ಆರ್. ಪೂಜಾರಿ, ಪ್ರಭು ಯತ್ನಟ್ಟಿ ವಿರುದ್ಧ ಸುಧೀರ್ಘ ಕಾನೂನು ಹೋರಾಟ ನಡೆಸಿ ತನ್ನ ಜಮೀನಿನ 99 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ಪಡೆದ ರೈತ.
ಪ್ರಕರಣ ವಿಚಾರಣೆ ನಡೆಸಿದ ಶಿಸ್ತು ಸಮಿತಿ ಅಧ್ಯಕ್ಷ ನರಸಿಂಹಸ್ವಾಮಿ ಎನ್.ಎಸ್., ಸದಸ್ಯರಾದ ರಾಜಣ್ಣ ಆರ್ ಹಾಗೂ ಚಂದ್ರಮೌಳಿ ಬಿ.ಆರ್. ಅವರು ತಪ್ಪಿತಸ್ಥ ವಕೀಲ ಯತ್ನಟ್ಟಿಯ ಸನ್ನದು ಶಾಶ್ವತವಾಗಿ ರದ್ದು ಮಾಡಿದ್ದಾರೆ. ಜತೆಗೆ ನೊಂದ ರೈತನಿಗೆ ನೀಡಬೇಕಾಗಿದ್ದ ಭೂಸ್ವಾಧೀನ ಪರಿಹಾರದ ಹಣ ತೆಗೆದು ಕೊಂಡಿದ್ದಷ್ಟೂ 99,68,5820 ರೂ. ಮರುಪಾವತಿಸಬೇಕು. ಜತೆಗೆ ಪ್ರೊಸೆಸಿಂಗ್ ಶುಲ್ಕವಾಗಿ ಪಡೆದಿದ್ದ 20 ಸಾವಿರ ರೂ.ಗಳ ಪೈಕಿ, 10 ಸಾವಿರ ರೂ.ಗಳನ್ನು ಸುಭಾಷ ಪೂಜಾರಿಗೆ ಹಿಂದಿರುಗಿಸಬೇಕು. ವಕೀಲರ ಪರಿಷತ್ತಿಗೆ 10 ಸಾವಿರ ರೂ.ದಂಡ ಪಾವತಿಸಬೇಕು ಎಂದು ಶಿಸ್ತು ಸಮಿತಿ ತನ್ನ ಆದೇಶದಲ್ಲಿ ನಿರ್ದೇಶಿಸಿದೆ.

Previous articleಮಹಿಳೆಯ ಜತೆ ಕಿರಿಕ್‌ ಕಂಡೆಕ್ಟರ್‌ಗೆ ಗೂಸಾ
Next articleಜುಲೈ 5ರಿಂದ ವಿಧಾನಸೌಧದ ಮುಂದೆ ಧರಣಿ