ಬೆಂಗಳೂರಿಗೆ ಆಗಮಿಸಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್​​​…

0
7

ಬೆಂಗಳೂರು : ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​​​ ಬೆಂಗಳೂರಿಗೆ ಆಗಮಿಸಿದ್ದು, HAL ವಿಮಾನ ನಿಲ್ದಾಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿರಿಂದ ಯೋಗಿಗೆ ಸ್ವಾಗತ ಕೋರಿದ್ಧಾರೆ.

ಒಂದೇ ಹೆಲಿಕಾಪ್ಟರ್​​​ನಲ್ಲಿ ಯೋಗಿ, ಸಿಎಂ ನೆಲಮಂಗಲಕ್ಕೆ ಪ್ರಯಾಣ ನಡೆಸಲಿದ್ಧಾರೆ. ಮಹದೇವಪುರದಲ್ಲಿ ನಡೆಯುತ್ತಿರುವ ಕ್ಷೇಮವನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ಧಾರೆ. ಯೋಗಿ ಧರ್ಮಸ್ಥಳ ಸಂಸ್ಥೆ ನಿರ್ಮಿಸಿರುವ ಕ್ಷೇಮವನ ಉದ್ಘಾಟಿಸಿದ್ಧಾರೆ. ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ, ಸಚಿವರು, ಸಂಸದರು, ಶಾಸಕರು ಸೇರಿ ಹಲವರು ಭಾಗಿಯಾಗಲಿದ್ಧಾರೆ. ಯೋಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಧ್ಯಾಹ್ನ ವಾಪಸ್​ ಆಗಲಿದ್ಧಾರೆ.

Previous articleಸರಣಿ ಅಪಘಾತ: ಒಂದೇ ಕುಟುಂಬದ ಮೂವರು ಸಾವು
Next articleಬೆಂಗಳೂರು ಭ್ರಷ್ಟಾಚಾರದ ಕ್ಯಾಪಿಟಲ್ ಆಗ್ತಿದೆ : ಕೃಷ್ಣಬೈರೇಗೌಡ…