ಬಿಜೆಪಿ ಸರಕಾರದಿಂದ ನಾರಾಯಣಗುರುಗಳಿಗೆ ಅವಮಾನ

0
16

ಮಂಗಳೂರು: ರಾಜ್ಯ ಸರ್ಕಾರ ಇತ್ತೀಚೆಗೆ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮದಿನಾಚರಣೆಯನ್ನು ಮಂಗಳೂರಿನ ಖಾಸಗಿ ಸಭಾಂಗಣದಲ್ಲಿ ಆಚರಿಸಿರುವುದನ್ನು ವಿರೋಧಿಸಿ ಬಿಜೆಪಿ ವಿರುದ್ಧ ಮಾಜಿ ಸಚಿವ ರಮಾನಾಥ ರೈ ನೀಡಿರುವ ಹೇಳಿಕೆ ಯಾವುದೇ ಅಪಮಾನವಲ್ಲ. ಅದರ ಬದಲು ನಾರಾಯಣಗುರುಗಳೇ ಸ್ಥಾಪಿಸಿದ ಕುದ್ರೋಳಿ ದೇವಸ್ಥಾನದಲ್ಲಿ ಜಯಂತಿ ಆಚರಿಸದೆ ರಾಜ್ಯ ಬಿಜೆಪಿ ಸರ್ಕಾರ ಅವಮಾನ ಎಸಗಿದೆ ಎಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಚರಿಸಬೇಕಾದ ನಾರಾಯಣಗುರು ಜಯಂತಿಯನ್ನು ಮಂಗಳೂರಿನಲ್ಲಿ ಜಿಲ್ಲಾ ಮಟ್ಟದಲ್ಲಿ
ಆಚರಿಸಲಾಗಿದೆ. ಕುದ್ರೋಳಿ ದೇವಸ್ಥಾನದಲ್ಲಿ ಸರ್ಕಾರ ಜಯಂತಿ ಆಚರಿಸಿದರೆ, ಅದಕ್ಕೆ ಒಳ್ಳೆಯ ಅರ್ಥ ಬರುತ್ತಿತ್ತು. ಅದೇ ದಿನ ಸಂಜೆ ದೊಡ್ಡ ಬಳ್ಳಾಪುರದಲ್ಲಿ ಬಿಜೆಪಿ ಜನಸ್ಪಂದನ ಸಮಾವೇಶ ನಡೆದಿದ್ದು, ಅಲ್ಲಿ ಕೂಡ ನಾರಾಯಣಗುರು ಹೆಸರನ್ನು ಉಲ್ಲೇಖಿಸುವ ಗೋಜಿಗೆ ಬಿಜೆಪಿ ಮುಖಂಡರು, ಸರ್ಕಾರ ಹೋಗಿಲ್ಲ ಎಂದು ಆರೋಪಿಸಿದರು.

Previous articleಮತ್ತೆ ಜೆಡಿಎಸ್ ಶಾಸಕರ ವಿರುದ್ಧ ಸಂಸದೆ ಸುಮಲತಾ ವಾಗ್ದಾಳಿ
Next articleಸಾಂಸ್ಕೃತಿಕ ಲೋಕದ ಬಹುದೊಡ್ಡ `ಗಣಿ’ ಮಲ್ಲಪ್ಪ