ಬಿಜೆಪಿ ಸಂಸದ ಡಿವಿ ಸದಾನಂದ ಗೌಡ ನಿವೃತ್ತಿ ಘೋಷಣೆ

0
28

ಹಾಸನ: ಚುನಾವಣಾ ರಾಜಕೀಯಕ್ಕೆ ಮಾಜಿ ಸಿಎಂ ಸದಾನಂದ ಗೌಡ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಇಂದು ಹಾಸನದಲ್ಲಿ ಬರ ಅಧ್ಯಯನ ನಂತರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸದಾನಂದ ಗೌಡ ಅವರು, ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಬಿಜೆಪಿ ಪಕ್ಷ ನನಗೆ 30 ವರ್ಷ ಎಲ್ಲವನ್ನೂ ಕೊಟ್ಟಿದೆ. ಬಿಎಸ್​ ಯಡಿಯೂರಪ್ಪ ನಂತರ ನಾನು ಮುಖ್ಯಮಂತ್ರಿಯಾಗಿ, ಸಂಸದನಾಗಿ, ಕೇಂದ್ರ ಕ್ಯಾಬಿನೇಟ್ ಮಂತ್ರಿಯಾಗಿ, ವಿರೋಧ ಪಕ್ಷದ ನಾಯಕನಾಗಿ, ಬಿಜೆಪಿ ರಾಜ್ಯಾಧ್ಯಕ್ಷನಾಗಿ ಹೀಗೆ ಎಲ್ಲವೂ ನನಗೆ ಸಿಕ್ಕಿದೆ. ಆದ್ದರಿಂದ ಚುನಾವಣಾ ರಾಜಕೀಯದಲ್ಲಿ ಮುಂದುವರೆಯಬಾರದು ಅಂತ ತೀರ್ಮಾನ ಮಾಡಿದ್ದೇನೆ ಎಂದರು.

Previous articleನಂಬರ್‌ 1 ಸ್ಥಾನಕ್ಕೇರಿದ ಶುಭ್ಮನ್‌ ಗಿಲ್, ಸಿರಾಜ್
Next articleಅಂಗರಕ್ಷಕನಿಂದ ಶೂ ಕಟ್ಟಿಸಿಕೊಂಡ ಸಚಿವ