ಬಿಜೆಪಿ ಬಿಟ್ಟವರು ಮೋದಿಗಾಗಿ ವಾಪಸ್ ಬನ್ನಿ

0
8

ಚಿಕ್ಕಮಗಳೂರು: ನಮ್ಮ ದೇಶದ ನಾಯಕ ಪ್ರಧಾನಿ ಮೋದಿಯವರನ್ನು ಇಂದು ಪ್ರಪಂಚ ಒಪ್ಪುತ್ತಿದೆ. ಅವರನ್ನ ಪಿಎಂ ಮಾಡಲು ಯಾರೇ ಪಾರ್ಟಿ ಬಿಟ್ಟಿದರೂ ವಾಪಸ್ ಬನ್ನಿ ಎಂದು ಪರೋಕ್ಷವಾಗಿ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಗೆ ಸಂಸದೆ ಶೋಭಾ ಕರಂದ್ಲಾಜೆ ಬಿಜೆಪಿಗೆ ಆಹ್ವಾನ ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಮೋದಿಗಾಗಿ, ಯಾರೇ ಪಕ್ಷ ಬಿಟ್ಟಿದ್ದರು ಸ್ವಾಗತವಿದೆ ಅನ್ನೋದು ನನ್ನ ಪ್ರಾರ್ಥನೆ. ಮೋದಿಯಂತ ನಾಯಕ ಈ ದೇಶಕ್ಕೆ ಮತ್ತೆ ಸಿಗಲ್ಲ. ಮೋದಿಗಾಗಿ, ದೇಶಕ್ಕಾಗಿ, ಮುಂದಿನ ಪೀಳಿಗೆಗಾಗಿ ಬರಬೇಕಿದೆ. ವಿಶ್ವದಲ್ಲಿ ಶಾಂತಿ ನೆಲೆಸುವ ಸಲುವಾಗಿ ಬರಬೇಕಿದೆ. ಎಲ್ಲರೂ ಒಗ್ಗೂಡಿ ಬಿಜೆಪಿ-ದೇಶವನ್ನ ಕಟ್ಟಬೇಕಿದೆ. ದೇಶದ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ I.N.D.I.A ಹಾಗೂ ಯಾವ ಪಾರ್ಟಿಯಲ್ಲೂ ಹುಡುಕಿದರೂ ಮೋದಯಂತಹ ನಾಯಕ ಸಿಗಲ್ಲ ಎಂದು ಅವರು ಹೇಳಿದ್ದಾರೆ.

Previous articleಡಿಸಿಪಿ ಗೋಪಾಲ ಬ್ಯಾಕೋಡ್ ವರ್ಗಾವಣೆ
Next articleದಾವಣಗೆರೆಯ ದಂಪತಿ ಅಮೇರಿಕಾದಲ್ಲಿ ಅನುಮಾನಸ್ಪದ ಸಾವು!