ಬಿಜೆಪಿ ನಾಯಕ ಸಿ.ಟಿ. ರವಿಗೆ ಸೋಲು

0
16


ಚಿಕ್ಕಮಗಳೂರು: ಬಿಜೆಪಿ ಭದ್ರಕೋಟೆಯಾಗಿದ್ದ ಚಿಕ್ಕಮಗಳೂರು ಇದೀಗ ಕಾಂಗ್ರೆಸ್ ಪಾಲಾಗಿದೆ. ಸಿ.ಟಿ.ರವಿಗೆ ಸೋಲಿನ ಆಘಾತ ಎದುರಾಗಿದೆ. ಕಳೆದ ೨೦ ವರ್ಷಗಳಿಂದ ಚಿಕ್ಕಮಗಳೂರು ಕ್ಷೇತ್ರ ಆಳಿದ್ದ ಬಿಜೆಪಿ ನಾಯಕ ಸಿಟಿ ರವಿ ತಮ್ಮ ಆಪ್ತ ತಮ್ಮಯ್ಯ ವಿರುದ್ಧವೇ ಸರಿಸುಮಾರು ೭,೯೦೦ ಮತಗಳ ಅಂತರದಿಂದ ಸೋಲಿನ ಕಹಿ ಅನುಭವಿಸಿದ್ದಾರೆ.
ಸಿಟಿ ರವಿ ೫೨೨೦೧ ಮತಗಳನ್ನು ಪಡೆದರೆ, ಕಾಂಗ್ರೆಸ್ ನಾಯಕ ಹೆಚ್‌ಡಿ ತಮ್ಮಯ್ಯ ೬೦೧೦೧ ಮತಗಳನ್ನು ಪಡೆದು ಗೆಲುವು ದಾಖಲಿಸಿದ್ದಾರೆ. ೧೯೮೯ರಿಂದ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಚಿಕ್ಕಮಗಳೂರಿನಲ್ಲಿ ಸಿಟಿ ರವಿ ೨೦೦೪ರ ವಿಧಾಸಭಾ ಚುನಾವಣೆಯಲ್ಲಿ ಕಮಲ ಅರಳಿಸಿದ್ದರು.

Previous articleಕುಷ್ಟಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಗೆಲುವು
Next articleಜಿಲ್ಲೆಯ ಭದ್ರಕೋಟೆ ವಶಪಡಿಸಿಕೊಂಡ ಕಾಂಗ್ರೆಸ್