ಬಾಯಿಗೆ ಮಣ್ಣು ಹಾಕಿಕೊಂಡು ಸರ್ಕಾರದ ವಿರುದ್ಧ ರೈತರ ಆಕ್ರೋಶ

0
24

ಮಂಡ್ಯ: ಮಂಡ್ಯ ಬಂದ್ ಹಿನ್ನೆಲೆಯಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತ ಶಿವಕುಮಾರ ಆರಾಧ್ಯ ಮಣ್ಣು ತಿಂದು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು. ಸಿದ್ದರಾಮಯ್ಯ ಅವರ ಭ್ರಷ್ಟ ಸರ್ಕಾರ ರೈತರ ಬಾಯಿಗೆ ಮಣ್ಣು ಹಾಕಿದೆ. ನಾವು ಹೆಂಡತಿಯ ತಾಳಿ ಅಡವಿಟ್ಟು ಬೋರ್‌ವೆಲ್ ಕೊರೆಸಿದ್ದೇವೆ. ಆದ್ರೆ ನೀರು ಬಾರದೇ ಬೆಳೆಗಳು ಹಾಳಾಗುತ್ತಿವೆ. ಈ ಸರ್ಕಾರ ಇಡೀ ಮಂಡ್ಯ ಜಿಲ್ಲೆಯ ರೈತರು ಮಣ್ಣು ತಿನ್ನುವಂತೆ ಮಾಡಿದೆ. ಅದಕ್ಕಾಗಿ ನಾವೇ ಮಣ್ಣು ಹಾಕಿಕೊಳ್ತಿದ್ದೇವೆ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ರೈತರು ಕನ್ನಡಪರ ಹಾಗೂ ಪ್ರಗತಿ ಪರ ಸಂಘನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ. ಬಿಜೆಪಿ, ಜೆಡಿಎಸ್ ಕಾರ್ಯಕರ್ತರೂ ಸಹ ಪ್ರತಿಭಟನೆಗೆ ಧುಮುಕಿದ್ದು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Previous articleವಾರಣಾಸಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ಶಂಕು ಸ್ಥಾಪನೆ
Next articleಇದು ಸರ್ಕಾರದ ಅಸಹಾಯಕತೆಯೋ…