ಬಸ್ ಅಪಘಾತ: ಇಬ್ಬರು ಪ್ರಯಾಣಿಕರ ದುರ್ಮರಣ

0
16

ವಿಜಯಪುರ : ತಾಲೂಕಿನ ಕಗ್ಗೋಡ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಲಾರಿ ಹಾಗೂ ಸರ್ಕಾರಿ ಬಸ್ಸಿನ ನಡುವೆ ಭೀಕರ ಅಪಘಾತ ಸಂಭವಿಸಿದೆ.
ಬಸ್ ಹಾಗೂ ಲಾರಿ ಮುಖಮುಖಿ ಡಿಕ್ಕಿ ಸಂಭವಿಸಿ ಬಸ್ ನಲ್ಲಿದ್ದ 2 ಪ್ರಯಾಣಿಕರು ಸ್ಥಳದಲ್ಲಿಯೇ ಸಾವನೊಪ್ಪಿದ್ದಾರೆ. ಇನ್ನೂ ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಿದ್ದ ಪ್ರಯಾಣಿಕರನ್ನು ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Previous articleಉಚಿತ ವಿದ್ಯುತ್: 12 ಲಕ್ಷ ನೋಂದಣಿ
Next articleನವನಗರ: ಎರಡು ಕೋಮುಗಳ ನಡುವೆ ಗಲಾಟೆ: ಕಲ್ಲು ತೂರಾಟ..!