ನಾರಾಯಣಪುರ (ಯಾದಗಿರಿ): ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ನಿನ್ನೆ ಮಧ್ಯೆ ರಾತ್ರಿಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ದುಮ್ಮಿಕ್ಕಿ ಬರುತ್ತಿರುವುದರಿಂದ ನಾರಾಯಣಪುರದ ಬಸವ ಸಾಗರ ಜಲಾಶಯಕ್ಕೆ ಆಲಮಟ್ಟಿ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಪ್ರಸ್ತುತ ಬಸವಸಾಗರ ಜಲಾಶಯಕ್ಕೆ 1,60,000 ಕ್ಯೂಸೆಕ್ಸ ಒಳ ಹರಿವು ಇದ್ದು, ಈಗ 3 ಗೇಟುಗಳ ಮೂಲಕ 28000 ಕ್ಯೂಸೆಕ್ಸ ಹೊರ ಬಿಡಲಾಗುತ್ತಿದೆ. ಮಧ್ಯಾಹ್ನದೊಳಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಹರಿಬಿಡಲಾಗುತ್ತದೆ ಎಂದು
ಜಿಲ್ಲಾಧಿಕಾರಿ ಹಾಗೂ ನೀರಾವರಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಜಲಾಶಯ ಮಟ್ಟ 490.05 ಮೀಟರ್ ಮಟ್ಟ. (492.250 ಗರಿಷ್ಠ ಮಟ್ಟ )24.19 TMC ಪ್ರಸ್ತುತ ನೀರಿನ ಸಂಗ್ರಹ. (33. ಗರಿಷ್ಟ ಟಿ ಎಮ್ ಸಿ ಸಂಗ್ರಹ ) ವಾಗಿದೆ.
ನದಿ ತೀರದ ಜನರು ಎಚ್ಚರದಿಂದ ಇರಬೇಕುಎಂದು ಅವರು ಮನವಿ ಮಾಡಿದ್ದಾರೆ.