Home ನಮ್ಮ ಜಿಲ್ಲೆ ಕೋಲಾರ ಬಲಿ ಕೊಡಲು ಸಿದ್ದರಾಮಯ್ಯರನ್ನ ಕೋಲಾರಕ್ಕೆ ಕರೆದಿದ್ದಾರೆ

ಬಲಿ ಕೊಡಲು ಸಿದ್ದರಾಮಯ್ಯರನ್ನ ಕೋಲಾರಕ್ಕೆ ಕರೆದಿದ್ದಾರೆ

0
115
ಇಬ್ರಾಹಿಂ

ಕೋಲಾರ: ಸಿದ್ದರಾಮಯ್ಯ ಅವರನ್ನ ಬಲಿ ಕೊಡಲು ಕೋಲಾರಕ್ಕೆ ಕರೆದುಕೊಂಡು ಬಂದಿದ್ದಾರೆ ಎಂದು ಸಿಎಂ ಇಬ್ರಾಹಿಂ ಹೇಳಿದರು.
ಕೋಲಾರದ ನಡೆದ ಅಲ್ಪ ಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದ ಅವರು, ಕೋಲಾರದಲ್ಲಿ ಕಾಂಗ್ರೆಸ್ ಗೆದ್ದ ಇತಿಹಾಸ ಇಲ್ಲ. ಮುಸ್ಲಿಂ ಸಮುದಾಯ ಜೆಡಿಎಸ್‌ನೊಂದಿಗೆ ಸೇರಿ ಶಕ್ತಿಯುತವಾಗಿದೆ. ಸಿದ್ದರಾಮಯ್ಯ ಇದು ನನ್ನ ಕೊನೆಯ ಚುನಾವಣೆ ಎನ್ನುತ್ತಿದ್ದಾರೆ. ಸಿದ್ದರಾಮಯ್ಯನವರು ತೆಗೆದುಕೊಂಡ ತಪ್ಪು ನಿರ್ಧಾರದಿಂದ ಇದು ಕೊನೆಯ ಚುನಾವಣೆ ಆಗಲಿದೆ ಎಂದರು.
ವಿಧಾನಸಭೆ ಅಧಿವೇಶನದ ಬಳಿಕ ಸಾಕಷ್ಟು ಜನ ನಾಯಕರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಎಲ್ಲರನ್ನ ಕರೆದುಕೊಳ್ಳಲ್ಲ ನಾವು, ಒಳ್ಳಯವರನ್ನ ಮಾತ್ರ ಕರೆದುಕೊಳ್ಳುತ್ತೇವೆ. ಅದರಲ್ಲೂ ಸಿಡಿ ಇಲ್ಲದೆ ಇರುವವರನ್ನ ಮಾತ್ರ ಬರ ಮಾಡಿಕೊಳ್ಳುತ್ತೇವೆ. ಸಿಡಿ ಇರುವ ೧೨ ಜನರಿಗೆ ಅವಕಾಶವಿಲ್ಲ ಎಂದರು.