ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ: ಆರೋಪಿಗಳ ಮನೆಯಲ್ಲಿ ಎನ್‌ಐಎ ವಿಚಾರಣೆ

0
105
NIA

ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಆರೋಪಿಗಳ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದೆ.
ಮುಸ್ತಫಾ ಪೈಚಾರ್, ಅಬುಬಕ್ಕರ್ ಸಿದ್ದಿಕ್, ಉಮ್ಮರ್ ಫಾರುಕ್, ಮಸೂದ್ ಅಗ್ನಾಡಿ ಸೇರಿದಂತೆ ಐದು ಮಂದಿ ಪ್ರಮುಖ ಆರೋಪಿಗಳಿಗಾಗಿ ಎನ್‌ಐಎ ಬೆಳ್ಳಾರೆ, ಸುಳ್ಯ ಹಾಗೂ ಕೊಡಗು ಜಿಲ್ಲೆಯಲ್ಲಿ ಶೋಧ ನಡೆಸುತ್ತಿದೆ. ತಲೆ ಮರೆಸಿಕೊಂಡಿರುವ ಆರೋಪಿಗಳ ಭಾವಚಿತ್ರವಿರುವ ವಾಂಟೆಡ್ ಭಿತ್ತಿಪತ್ರವನ್ನು ಸಾರ್ವಜನಿಕ ಸ್ಥಳಗಳಲ್ಲಿ ಎನ್‌ಐಎ ಅಂಟಿಸಲಿದೆ.

Previous articleಹಿರಿಯ ನಿರ್ದೇಶಕ ಸಿ.ವಿ. ಶಿವಶಂಕರ್ ನಿಧನ
Next articleಆಷಾಢ ಏಕಾದಶಿ: ಪಂಢರಪುರಕ್ಕೆ ವಿಶೇಷ ರೈಲು