ಪ್ರವೀಣ್ ನೆಟ್ಟಾರು ಪತ್ನಿಗೆ ಕೆಲಸ ಸಿಎಂ ಬೊಮ್ಮಾಯಿ ಘೋಷಣೆ

0
41

ದೊಡ್ಡಬಳ್ಳಾಪುರ: ಮಂಗಳೂರಿನ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ಪತ್ನಿಗೆ ನನ್ನ ಕಚೇರಿಯಲ್ಲಿ ಕೊಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಜನಸ್ಪಂದನ ಸಮಾವೇಶದಲ್ಲಿ ಘೋಷಣೆ ಮಾಡಿದರು.

ಕೆಲವು ತಿಂಗಳ ಹಿಂದೆ ಪ್ರವೀಣ್ ನೆಟ್ಟಾರು ಅವ್ರನ್ನ ದುಷ್ಕರ್ಮಿಗಳು ಕೊಲೆಗೈದಿದ್ದರು. ಇದಕ್ಕೆ ದೇಶದ್ಯಾಂತ ಆಕ್ರೋಶ ವ್ಯಕ್ತವಾಗಿತ್ತು. ಈಗ ಪ್ರವೀಣ್ ನೆಟ್ಟಾರು ಪತ್ನಿಗೆ ಕೆಲಸ ಕೊಡುವುದನ್ನ ಘೋಷಣೆಯನ್ನ ಬೊಮ್ಮಾಯಿ ಅವರು ಮಾಡಿದ್ದಾರೆ.

ಅಂತೆಯೇ ಮಾತನಾಡಿದ ಸಿಎಂ, ಬೆಂಗಳೂರಿನಲ್ಲಿ 3 ಹೊಸ ಸ್ಯಾಟಲೈಟ್​ ನಗರ ಆರಂಭವಾಗಿದೆ. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ನಮ್ಮ ಗುರಿ ಹೊಂದಿದ್ದೇವೆ. ಕಾಂಗ್ರೆಸ್​ ಭ್ರಷ್ಟಾಚಾರವನ್ನು ರಾಜ್ಯದ ಜನತೆ ನೋಡಿದ್ದಾರೆ, ಮುಂದೆಯೂ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರಲಿದೆ, ಧೈರ್ಯವಿದ್ದರೆ, ತಾಕತ್ ಇದ್ದರೆ ನಮ್ಮ ಓಟ ನಿಲ್ಲಿಸಿ ಎಂದು ಸಿಎಂ ಹೇಳಿದರು.

Previous articleಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ನಿರ್ಮೂಲನೆಯಾಗಲಿದೆ
Next articleಇದು ಜನಸ್ಪಂದನ ಅಲ್ಲ. ಇದು ಸಮಾವೇಶ ; ಡಿಕೆ ಸುರೇಶ್