ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಮಹಾ ಕುಂಭಮೇಳ ಆಚರಣೆ: ಸಿಎಂ ಬೊಮ್ಮಾಯಿ

ಮಹಾ ಕುಂಭಮೇಳ

ಮಂಡ್ಯ: ಮಹಾ ಕುಂಭಮೇಳ ಪ್ರತಿ 12 ವರ್ಷಗಳಿಗೊಮ್ಮೆ ನಿಗದಿತವಾಗಿ ನಡೆಯಲು ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಘೋಷಣೆ ಮಾಡಿದರು.
ಅವರು ಇಂದು ಶ್ರೀ ಮಲೆಮಹಾದೇಶ್ವರ ಕುಂಭಮೇಲದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾವೇರಿ, ಲಕ್ಷ್ಮಣತೀರ್ಥ, ಹೇಮಾವತಿ ಮೂರು ಪವಿತ್ರ ನದಿಗಳ ಸಂಗಮವಾದ ಪುಣ್ಯಸ್ಥಳ ತ್ರಿವೇಣಿ ಸಂಗಮದಲ್ಲಿ ಈ ವರ್ಷ ಮಹಾ ಕುಂಭಮೇಳವನ್ನು ಪರಮ ಪೂಜ್ಯರ ನೇತೃತ್ವದಲ್ಲಿ ಪ್ರಾರಂಭಿಸಿ ಬಹಳ ಉತ್ತಮವಾಗಿ ನಡೆದಿದೆ ಎಂದರು.
ವೈಶಿಷ್ಟ್ಯ ಪೂರ್ಣ ದೇಶ ಭಾರತ. ಭಕ್ತಿಯ ಚಳವಳಿ ಬೇರೆ ಯಾವ ದೇಶದಲ್ಲಿಯೂ ಆಗಿಲ್ಲ. ಶಂಕರಾಚಾರ್ಯರು, ಮಧ್ವಾಚಾರ್ಯರು, ರಾಮಾನುಜಮ್ ಒಂದೆಡೆ ಇದ್ದರೆ, ನಮ್ಮ ಪುರಾಣ, ವೇದಗಳು ಬುದ್ಧ, ಬಸವ, ಹಲವಾರು ಜನ ವಿಚಾರವಂತರು ಇರುವ ದೇಶ ನಮ್ಮದು. ಇದು ನಮ್ಮ ವೈಶಿಷ್ಟ್ಯ. ಬೇರೆಡೆ ಸಂಬಂಧ, ಶ್ರೀಮಂತಿಕೆ ಸಿಗುವುದಿಲ್ಲ. ಸಾಮಾಜಿಕ ಸಂಬಂಧಗಳನ್ನು ವೃದ್ದಿ ಮಾಡಿರುವ ಮೌಲ್ಯಗಳನ್ನು ಕೊಟ್ಟಿರುವ ಮಹಾನ್ ಬದುಕು ಭಾರತದಲ್ಲಿದೆ. ಇದನ್ನು ಉಳಿಸಿ ಕೊಳ್ಳುವುದು ಮುಖ್ಯ. ಪರಕೀಯರು ಇದರ ಮೇಲೆ ದಾಳಿ ಮಾಡಿದ್ದು ಈ ಸಂಸ್ಕಾರ, ಸಂಸ್ಕೃತಿ, ಧರ್ಮ, ಪರಂಪರೆಯನ್ನು ಒಡೆದು ನಾಶ ಮಾಡಬೇಕೆಂದು ದಾಳಿಗಳಾಗಿವೆ. ಈ ದಾಳಿಯನ್ನು ಸಂಪೂರ್ಣವಾಗಿ ಎದುರಿಸಿ ಮತ್ತೆ ಭಾರತಾಂಬೆ ಸುಸಂಸ್ಕೃತ ಜನರನ್ನು ಎತ್ತಿ ಹಿಡಿದಿದ್ದಾಳೆ. ಮೊಘಲರು, ಬ್ರಿಟಿಷ್, ಫ್ರೆಂಚ್, ಪೋರ್ಚುಗೀಸರು ಇಲ್ಲಿ ಕೊನೆಯಾದರು. ಶ್ರೇಷ್ಠವಾದ ಮಣ್ಣು ಭಾರತದ್ದು. ಇದೆ ನಮ್ಮ ಅಸ್ಮಿತೆ. ಭಾರತೀಯರನ್ನು ಗುರುತಿಸುವುದೇ ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರದಿಂದ. ಇದನ್ನು ಉಳಿಸಬೇಕು. ನಮ್ಮ ಧರ್ಮದಲ್ಲಿ ಸಹಿಷ್ಣುತೆ, ವೈಚಾರಿಕತೆ, ಎಲ್ಲರೂ ನಮ್ಮವರೇ, ಮನುಕುಲ ಒಂದು, ಬೇಧಭಾವವಿಲ್ಲದ ಜೀವನ ಧರ್ಮ ನಮ್ಮ ಹಿಂದೂ ಧರ್ಮದಲ್ಲಿದೆ. ಇಡೀ ವಿಶ್ವದ ಸುಖ ಶಾಂತಿ ನೆಮ್ಮದಿ, ಮಾನವೀಯ ಮೌಲ್ಯಗಳು ಉಳಿಯಬೇಕು. ಇವುಗಳ ಪಾಲನೆ, ಪುಣ್ಯ ಪ್ರಾಪ್ತಿ ಎಂಬ ಭಾವ ಒಳಗಿನ ಪ್ರವಿತ್ರತೆ ಕಾಪಾಡುವ ಪ್ರಕ್ರಿಯೆ ಇದು ಎಂದರು.