ಪುಣ್ಯ ಕ್ಷೇತ್ರಗಳಲ್ಲಿ ಮಹಿಳೆಯರ ದಟ್ಟಣೆ ಕಡಿಮೆ

0
18

ಮಂಗಳೂರು: ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಚಾಲನೆಗೊಂಡ ಎರಡನೇ ವಾರಾಂತ್ಯದಲ್ಲಿ ಕರಾವಳಿಯ ಪವಿತ್ರ ಪುಣ್ಯ ಕ್ಷೇತ್ರಗಳಲ್ಲಿ ಮಹಿಳೆಯ ದಟ್ಟಣೆ ಕಡಿಮೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ, ಸೌತಡ್ಕ, ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಹಾಗೂ ಉಡುಪಿ ಜಿಲ್ಲೆಯ ಕೊಲ್ಲೂರು, ಉಡುಪಿ ಕೃಷ್ಣ ಮಠಗಳಲ್ಲಿ ಈ ವಾರಾಂತ್ಯದಲ್ಲಿ ಮಹಿಳೆಯರ ದಟ್ಟಣೆ ಸ್ವಲ್ಪ ಕಡಿಮೆಯಾಗಿದ್ದು ಒತ್ತಡವಿರಲಿಲ್ಲ.
ಪ್ರತೀ ವಾರಾಂತ್ಯದಲ್ಲೂ ಪುಣ್ಯ ಕ್ಷೇತ್ರಗಳಲ್ಲಿ ಜನದಟ್ಟಣೆ ಇದ್ದೇ ಇರುತ್ತದೆ. ಈ ವಾರವೂ ಹೆಚ್ಚುಕಮ್ಮಿ ಆ ಮಟ್ಟದಲ್ಲೇ ಜನದಟ್ಟಣೆ ಇತ್ತು. ಕಳೆದ ವಾರಾಂತ್ಯದಲ್ಲಿ ರಾಜ್ಯದ ವಿವಿಧೆಡೆಗಳಿಂದ ಮಹಿಳೆಯರು ಗುಂಪು ಗುಂಪಾಗಿ ಶಕ್ತಿ ಬಸ್ಸೇರಿ ಪುಣ್ಯ ಕ್ಷೇತ್ರಗಳಿಗೆ ಆಗಮಿಸಿದ್ದರಿಂದ ತೀವ್ರ ಜನದಟ್ಟಣೆಗೊಂಡು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

Previous articleದಕ್ಷಿಣದ ಬಾಗಿಲು ತೆರೆಸಿದ ಸಿಎಂ
Next articleಸರಕಾರದ ಖಜಾನೆ ಲಾಕ್ ಆಗಿದೆ