ಪಾಕ್‌ ಮಾಜಿ ಪ್ರಧಾನಿ ಅರೆಸ್ಟ್‌

0
24

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ರಾಜಧಾನಿ ಇಸ್ಲಾಮಾಬಾದ್‌ನ ಕೋರ್ಟ್ ಆವರಣದಲ್ಲೇ ಬಂಧಿಸಲಾಗಿದೆ.
ಪಾಕಿಸ್ತಾನ ಪ್ಯಾರಾ ಮಿಲಿಟರಿ ಫೋರ್ಸ್​ ಭ್ರಷ್ಟಾಚಾರ ಪ್ರಕರಣದಲ್ಲಿ ಅವರನ್ನು ಬಂಧಿಸಿದೆ. ವಿಧ ಪ್ರಕರಣಗಳಲ್ಲಿನ ಎಫ್ಐಆರ್ ಹಾಗೂ ಕೊಲೆ ಯತ್ನ ಪ್ರಕರಣದಲ್ಲಿ ಜಾಮೀನು ಪಡೆಯಲು ಇಸ್ಲಾಮಾಬಾದ್ ಹೈಕೋರ್ಟ್‌ಗೆ ಬರುತ್ತಿದ್ದ ಸಂದರ್ಭದಲ್ಲಿ ಇಮ್ರಾನ್ ಖಾನ್‌ ಅವರನ್ನು ಬಂಧಿಸಲಾಗಿದೆ. ಮೇ 1ರಂದೇ ಬಂಧನ ವಾರಂಟ್ ಜಾರಿಯಾಗಿತ್ತು.
ಚುನಾವಣಾ ಪ್ರಚಾರವನ್ನು ಹತ್ತಿಕ್ಕುವ ಪ್ರಯತ್ನವಾಗಿ ಸರ್ಕಾರವು ನನ್ನನ್ನು ಬಂಧಿಸಲು ಪ್ರಯತ್ನಿಸುತ್ತಿದೆ. ಬಂಧಿಸುವುದು ಕೇವಲ ನಾಟಕವಾಗಿದೆ. ಅಪಹರಿಸಿ ಹತ್ಯೆ ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಇತ್ತೀಚೆಗಷ್ಟೇ ಇಮ್ರಾನ್‌ ಖಾನ್‌ ಆರೋಪಿಸಿದ್ದರು.

Previous articleಶೇ 93 ಅಂಕಗಳಿಸಿದ ಬಾಲ ಮಂದಿರ ವಿದ್ಯಾರ್ಥಿನಿಗೆ ಐಎಎಸ್‌ ಕನಸು
Next articleಧಾರವಾಡದಲ್ಲಿ ಪೇಡಾ ಮತಗಟ್ಟೆ