ಹುಬ್ಬಳ್ಳಿ: ಹು-ಧಾ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದೀಪಕ ಚಿಂಚೋರೆ ಅವರ ಸೋಲಿಗೆ ನೈತಿಕ ಹೊಣೆ ಹೊತ್ತು ೩೦ನೇ ವಾರ್ಡಿನ ಅಧ್ಯಕ್ಷ ಸ್ಥಾನಕ್ಕೆ ನವೀದ್ ಮುಲ್ಲಾ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೀಪಕ ಚಿಂಚೋರೆ ಅವರ ಗೆಲುವಿಗಾಗಿ ಪಕ್ಷದ ಮುಖಂಡರು ಹಾಗೂ ಈ ಭಾಗದ ಕಾರ್ಯಕರ್ತರು ಮನೆಮನೆಗೆ ತೆರಳಿ ಪಕ್ಷದ ಗ್ಯಾರಂಟಿ ಕಾರ್ಡ ಮುಟ್ಟಿಸಿ ಶಿಸ್ತು ಬದ್ಧವಾಗಿ ಚುನಾವಣಾ ಪ್ರಚಾರವನ್ನು ಕೈಗೊಂಡು ಹಗಲಿರುಳು ಶ್ರಮಿಸಿದೆವು ಆದರೂ ಫಲಿತಾಂಶ ನಮ್ಮ ಪರವಾಗಿ ಬಂದಿಲ್ಲ ಆದ ಕಾರಣ ಇನ್ಮೂಂದೆ ಈ ವಾರ್ಡಿನಲ್ಲಿ ತಮ್ಮನ್ನು ಎಲ್ಲ ಜವಾಬ್ದಾರಿ ಗಳಿಂದ ಮುಕ್ತಗೊಳಿಸಿ ಇಲ್ಲಿ ಪರ್ಯಾಯ ತಂಡವನ್ನು ರಚಿಸಿ ಅಂತಹವರಿಗೆ ಪಕ್ಷದ ಸಂಘಟನೆ ಹಾಗೂ ಮುಂದಿನ ಚುನಾವಣಾ ಉಸ್ತುವಾರಿಯ ಜವಾಬ್ದಾರಿಯನ್ನು ನೀಡುವಂತೆ ನಾಯಕರಲ್ಲಿ ಕೋರಿದ್ದಾರೆ.