ನೇಹಾ ತಂದೆ ನಿರಂಜನ ನಿವಾಸಕ್ಕೆ ಸಿಐಡಿ ಡಿಜಿಪಿ ಭೇಟಿ

0
13

ಹುಬ್ಬಳ್ಳಿ: ಇಲ್ಲಿನ ಬಿಡನಾಳದಲ್ಲಿರುವ ನೇಹಾ ಹಿರೇಮಠ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿದ ಸಿಐಡಿ ಡಿಜಿಪಿ ಡಾ.ಎಂ.ಎ. ಸಲೀಂ ಅವರು ನೇಹಾ ಅವರ ತಂದೆ ಹಾಗೂ ಕಾರ್ಪೊರೇಟರ್ ನಿರಂಜನ ಹಿರೇಮಠ ಅವರಿಂದ ಕೆಲ ಮಾಹಿತಿಯನ್ನು ಪಡೆದುಕೊಂಡರು.
ಮಗಳನ್ನು ಕೊಲೆ ಮಾಡಿದ ಫಯಾಜ್‌ನನ್ನು ಮಾತ್ರ ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರಿದ್ದು, ಅವರನ್ನೂ ವಿಚಾರಣೆಗೊಳಪಡಿಸಬೇಕು ಎಂದು ನೇಹಾ ತಂದೆ ಈ ವೇಳೆ ಸಿಐಡಿ ಡಿಜಿಪಿಗೆ ಮನವಿ ಮಾಡಿದರು ಎಂದು ತಿಳಿದಿದೆ.
ಸಿಐಡಿ ಡಿಜಿಪಿ ಭೇಟಿ ಬಳಿಕ ಮಾತನಾಡಿದ ನಿರಂಜನ ಹಿರೇಮಠ, ಎಫ್‌ಎಸ್‌ಎಲ್ ವರದಿ ಬಂದ ತಕ್ಷಣ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವುದಾಗಿ ಸಿಐಡಿ ಡಿಜಿಪಿ ತಿಳಿಸಿದ್ದಾರೆ. ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ ಎಂದರು.

Previous articleಪಶ್ಚಿಮ ಬಂಗಾಳ ಸರ್ಕಾರದ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ
Next articleಒಡನಾಡಿ ಸ್ಟಾನ್ಲಿ ಹೊಸ ಬಾಂಬ್