ಹುಬ್ಬಳ್ಳಿ: ರಕ್ತದಲ್ಲಿ ಪತ್ರ ಬರೆಯು ಮೂಲಕ ಜಗದೀಶ ಶೆಟ್ಟರ ಗೆ ಹುಬ್ಬಳ್ಳಿಯ ಯುವಕ ಬೆಂಬಲ ಸೂಚಿಸಿದ್ದಾನೆ.
ಜಗದೀಶ ಶೆಟ್ಟರ ಗೆಲ್ಲುವುದಿಲ್ಲ. ಬೇಕಾದರೆ ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದು ಹೇಳಿಕೆ ನೀಡಿದ್ದ ಬಿ.ಎಸ್.ಯಡಿಯೂರಪ್ಪ ಅವರಿಗೆ ಲಿಂಗಾಯತ ಯುವ ಯುವ ಮುಖಂಡ ತಿರುಗೇಟು ನೀಡಿದ್ದಾನೆ. ಜಗದೀಶ್ ಶೆಟ್ಟರ್ ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆ ಎಂದು ಮಂಜುನಾಥ ಯಂಟ್ರುವಿ ಎಂಬ ಯುವಕ ಪತ್ರ ಬರೆದಿದ್ದಾರೆ. ಸಧ್ಯ ಈ ಪತ್ರ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ವೈರಲ್ ಆಗುತ್ತಿದ್ದು, ಶೆಟ್ಟರ ನೂರಕ್ಕೆ ನೂರು ಗೆಲ್ಲುತ್ತಾರೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರೋದು ಸಹ ನೂರಕ್ಕೆ ನೂರು ಸತ್ಯ ಎಂದು ಪತ್ರದಲ್ಲಿ ಬರೆಯಲಾಗಿದೆ.