ಕಲಬುರಗಿ: ಕಲಬುರಗಿ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಪಾಣೆಗಾಂವ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 249 ಮತಗಟ್ಟೆಯಲ್ಲಿ ಒಟ್ಟು 993 ಮತದಾರರಲ್ಲಿ 9 ಗಂಟೆಗೆ 173 ಜನ ಮತದಾನ ಮಾಡಿದರು. ಅದೇ ರೀತಿ ಮತ್ತೊಂದು ಬೂತನಲ್ಲಿ 959 ಮತದಾರಲ್ಲಿ 140 ಜನ ಮತದಾನ ಮಾಡಿದರು.
ಇದೇ ಮೊದಲ ಬಾರಿಗೆ ಮತ ಹಕ್ಕು ಚಲಾಯಿಸಲು ಬಂದಿದ್ದ ಆಳಂದ ತಾಲೂಕಿನ ಡಿಗ್ರಿ ಕಾಲೇಜಿನ ಪ್ರಥಮ ವರ್ಷದ ವಿದ್ಯಾಥಿನಿ ಶೃತಿ ಸೂರ್ಯಕಾಂತ ಚಿನಮಳಿ ಪ್ರತಿಕ್ರಿಯಿಸಿ ಬಹಳ ಖುಷಿ ತಂದಿದೆ. ಎಲ್ಲರು ತಪ್ಪದೆ ಮತದಾನ ಮಾಡಿರಿ ಎಂದರು. ನಾನೂ ಅಂತ ಒಳ್ಳೆಯ ವರಿಗೆ ಮತ ಹಾಕುತ್ತಿದ್ದಿನಿ. ನೀವೂ ಒಳ್ಳೆಯವರಿಗೆ ಮತ ಚಲಾಯಿಸಿರಿ ಎಂದರು.