ನಿಯಂತ್ರಣ ತಪ್ಪಿ ಉರುಳಿದ ಬಸ್: 30 ಜನರಿಗೆ ಗಾಯ

0
19


ಮಾನ್ವಿ: ಮಾನ್ವಿ ಪಟ್ಟಣದ ಹೊರವಲಯದ ಸಿಂಧನೂರು ರಸ್ತೆಯ ನಂದಿಹಾಳ ಗ್ರಾಮದ ಹತ್ತಿರ ಬೆಂಗಳೂರಿನ ಕುರುಬರಹಳ್ಳಿಯ
ಚಾಲಕರ ಸಂಘದ 30ಕ್ಕೂ ಹೆಚ್ಚು ಮಂದಿ
ದರ್ಶನ ಪಡೆದು ಬೆಂಗಳೂರಿನ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಬಸ್ ಮೂಲಕ ಆಗಮಿಸಿ ಮರಳಿ ಬೆಂಗಳೂರಿಗೆ ತೆರಳುವ ಸಂಧರ್ಭ ಮಾರ್ಗ ಮಧ್ಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ರಸ್ತೆ ಪಕ್ಕದ ಜಮೀನಿಗೆ ಬಸ್ ಉರುಳಿದ ಪರಿಣಾಮ ಬಸ್ ನಲ್ಲಿ 31 ಜನಕ್ಕೆ ಸಣ್ಣಪುಟ್ಟ ಗಾಯ.
ಗಾಯಾಳುಗಳಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ಚಾಲಕನಿಗೆ ಹೊಟ್ಟೆಯ ಮೇಲೆ ಗಾಯವಾದರೆ ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಪೊಲೀಸ್ ಇನ್ಸ್‌ಪೆಕ್ಟರ್ ವೀರಭದ್ರಯ್ಯ ಹಿರೇಮಠ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ವಿಚಾರಿಸಿ ತನಿಖೆ ಕೈಗೊಂಡಿದ್ದಾರೆ.

Previous articleಜುಲೈ 5ರಿಂದ ವಿಧಾನಸೌಧದ ಮುಂದೆ ಧರಣಿ
Next articleಆಮೂಲಾಗ್ರ ಸುಧಾರಣೆಗೆ ಕ್ರಮ