ನೇಕಾರ ಸಮೂಹದ ಪ್ರತಿನಿಧಿಯಾಗಿ ತೇರದಾಳ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದ ಕುರುಹಿನಶೆಟ್ಟಿ ಗುರುಪೀಠದ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ.
ನಾಮಪತ್ರ ಹಿಂಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸ್ವಾಮೀಜಿ, ಗುರುಗಳ ಮಾತು ಮೀರಲಾಗದೇ ನಾಮಪತ್ರ ಹಿಂದೆ ಪಡೆಯುತ್ತಿದ್ದೇನೆ. ನಾಮಪತ್ರ ಸಲ್ಲಿಸುವ ಮೊದಲು ಗುರುಗಳ ಅನುಮತಿ ಪಡೆಯಬೇಕಿತ್ತು. ಆಗ ಅವರಿಗೆ ತಿಳಿಸಿದ್ದರೆ ಇವತ್ತು ನಾಮಪತ್ರ ಹಿಂಪಡೆಯುವ ಪ್ರಶ್ನೆ ಬರುತ್ತಿರಲಿಲ್ಲ ಎಂದರು.