ನಮ್ಮ ಸಿಎಂ ಗಟ್ಟಿತನವನ್ನು ತೋರಲಿ

0
38

ಬಳ್ಳಾರಿ:ಕಾವೇರಿ ನೀರು ಉಳಿಸುವ ಸಲುವಾಗಿ ಜೈಲಿಗೆ ಹೋಗಲು ಸಿದ್ದರಾಮಯ್ಯ ಸಿದ್ಧ ರಾಗಲಿ ಎಂದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ನಗರದ ಅತಿಥಿ ಗೃಹದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ಮಂತ್ರಿಗಳು ಭ್ರಷ್ಟಾಚಾರ ಕಾರಣಕ್ಕೆ ಜೈಲಿಗೆ ಹೋಗಿದ್ದಾರೆ. ಸಿದ್ದರಾಮಯ್ಯ ಅವರು ಗಟ್ಟಿ ಧೈರ್ಯ ತೋರಿ ನೀರು ನಿಲ್ಲಿಸಲಿ. ಆಗ ಆಗುವುದು ಏನು? ನಿಮಗೆ ಛೀಮಾರಿ ಹಾಕಬಹುದು. ನಿಮ್ಮನ್ನು ತೆಗೆದು ಹಾಕಬಹುದು. ಅಥವಾ ಜೈಲಿಗೆ ಕಳುಹಿಸಬಹುದು. ರೈತರಿಗಾಗಿ ಅವರು ಜೈಲಿಗೆ ಹೋಗಲು ಸಿದ್ಧರಾಗಬೇಕು ಎಂದರು.
ಹಿಂದೆ ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸದನದಲ್ಲಿ ವಿಷಯ ಮಂಡನೆ ಮಾಡಿ ಯಾವುದೇ ಕಾರಣಕ್ಕೂ ನಾವು ನೀರು ಬಿಡಲ್ಲ ಎಂದು ಘೋಷಿಸಿದರು. ಅಂತಹ ಗಟ್ಟಿತನವನ್ನು ನಮ್ಮ ಸಿಎಂ ತೋರಲಿ ಎಂದರು.
ತಮಿಳುನಾಡು ಸರ್ಕಾರ ಅದಾಗಲೇ ಸದನದಲ್ಲಿ ಒಂದೇ ಸಾಲಿನ ವಿಷಯ ಪಾಸ್ ಮಾಡಿ ನೀರಿಗೆ ಆಗ್ರಹಿಸಲು ನಿರ್ಧರಿಸಿದ್ದಾರೆ. ಅಂಥ ಗಟ್ಟಿತನವನ್ನು ಈಗ ತೋರಬೇಕು. ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಾಯಕರು ಈ ವಿಷಯದಲ್ಲಿ ಸಂಪೂರ್ಣ ವಿಫಲ ಆಗಿದ್ದಾರೆ ಎಂದು ಅವರು ಆರೋಪಿಸಿದರು.

Previous articleಹಿರಿಯ ಪತ್ರಕರ್ತ ಪಿ.ಎಂ. ಮಣ್ಣೂರ ಇನ್ನಿಲ್ಲ
Next articleಫೈನಲ್ ಪ್ರವೇಶಿಸಿದ ಸಂಯುಕ್ತ ಕರ್ನಾಟಕ