ನನ್ನ ರುಂಡವೂ ಕಾಂಗ್ರೆಸ್‌ಗೆ ಹೋಗಲ್ಲ

0
8

ಬೆಳಗಾವಿ(ಅಥಣಿ): ಕಾಂಗ್ರೆಸ್‌ಗೆ ನನ್ನ ರುಂಡ ಕೂಡ ಹೋಗಲ್ಲ. ನಾನು ಬಿಜೆಪಿಯಲ್ಲೇ ಉಳಿಯುತ್ತೇನೆ. ಬಿಜೆಪಿಯಲ್ಲೇ ನನ್ನ ರಾಜಕಾರಣ ಎಂಡ್ ಆಗುತ್ತೆ ಎಂದು ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಕಡ್ಡಿ ಮುರಿದಂತೆ ಹೇಳಿದ್ದಾರೆ.
ಅಥಣಿ ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಜಗದೀಶ್ ಶೆಟ್ಟರ ಮತ್ತು ಲಕ್ಷ್ಮಣ ಸವದಿ ಅವರಿಗೆ ಶೋಭಾ ಕರಂದ್ಲಾಜೆ ಅವರು ಪರೋಕ್ಷ ಆಹ್ವಾನ ನೀಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರೆಲ್ಲ ಸ್ವಯಂಘೋಷಿತ ಲೀಡರ್‌ಗಳು, ತಾವು ತಾವೇ ಮಾಧ್ಯಮಗಳಲ್ಲಿ ಹಾಕಿಸುತ್ತಾರೆ. ಅವರು ನಮಗೇನೂ ಜರೂರತ್ ಇಲ್ಲ, ಇಂತಹ ಪ್ರಮಾಣದಲ್ಲಿ ಅಸಹ್ಯ ಮಾಡಿದವರನ್ನ ತಗೊಳ್ಳೋದು ನಾಯಕರಿಗೆ ಬಿಟ್ಟ ವಿಚಾರ. ಅವರನ್ನು ಪಕ್ಷಕ್ಕೆ ತಗೊಂಡ್ರೆ ಸ್ವಾಗತ ಎಂದರು.
ಸಚಿವ ಸತೀಶ್ ಜಾರಕಿಹೊಳಿ ಅವರ ಮಗಳಿಗೆ ಲೋಕಸಭೆ ಕಾಂಗ್ರೆಸ್ ಟಿಕೆಟ್ ಕೊಟ್ರೆ ನೀವು ಸ್ಪರ್ಧೆ ಮಾಡ್ತೀರಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಲೋಕಸಭೆ ಚುನಾವಣೆಗೆ ನಿಲ್ಲಲ್ಲ. ನನ್ನ ಮಗಳಿಗೆ ಟಿಕೆಟ್ ನೀಡಿದರೂ ನಾನು ಪಕ್ಷದ ಪರ ಕೆಲಸ ಮಾಡುವೆ ಎಂದ ಹೇಳಿದರು.

Previous articleಶೆಟ್ಟರ್ ಬಕೆಟ್‌ ಹಿಡಿದು ಸಿಎಂ ಆಗಿದ್ರಾ?
Next articleಧಾರಾಕಾರ ಮಳೆ: ದವಸ-ಧಾನ್ಯ ಹಾನಿ