ನನ್ನನ್ನು ಲಿಂಗಾಯತ ವಿರೋಧಿ ಎಂದು ಬಿಂಬಿಸಲು ಹೊರಟಿದ್ದಾರೆ

0
16
ಸಿದ್ದರಾಮಯ್ಯ

ಬಾಗಲಕೋಟೆ: ಬಿಜೆಪಿಗರು ನನ್ನನ್ನು ಲಿಂಗಾಯತ ವಿರೋಧಿ ಎಂದು ಬಿಂಬಿಸಲು ಹೊರಟಿದ್ದಾರೆ ಆದರೆ ಅವರಿಂದ ಅದು ಸಾಧ್ಯವಾಗೋದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ರವಿವಾರ ಕೂಡಲಸಂಗಮದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಲಿಂಗಾಯತರ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ ಹೀಗಾಗಿ ನನ್ನನ್ನು ಲಿಂಗಾಯತರ ವಿರೋಧಿ ಎಂದು ಬಿಂಬಿಸಲು ಬಿಜೆಪಿಯಿಂದ ಸಾಧ್ಯವಾಗೋದಿಲ್ಲ ಎಂದರು.
ಬಜೆಪಿ ಲಿಂಗಾಯತರನ್ನು ಕಡೆಗಣಿಸುತ್ತಿದೆ. ಅದು ಅವರಿಗೆ ಮುಳುವಾಗುತ್ತದೆ ಎಂದು ಹೇಳಲಾರೆ. ಆದರೆ ಅವರಿಂದ ಕಡೆಗಣನೆ ಆಗುತ್ತಿರುವುದಂತೂ ನಿಜ ಎಂದರು.
ಕೂಡಲಸಂಗಮ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಗೈರು ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಡಿಕೆಶಿ ಅವರಿಗೆ ಪೂರ್ವ ನಿಗದಿತ ಬೇರೆ ಕಾರ್ಯಕ್ರಮಗಳಿವೆ. ನಾಳೆಯಿಂದ ನನಗೂ ಬೇರೆ ಕಾರ್ಯಕ್ರಮಗಳಿವೆ ಎಂದರು.

Previous articleಚುನಾವಾಣಾ ಕರ್ತವ್ಯಲೋಪ: ಗ್ರಾಮ ಆಡಳಿತ ಅಧಿಕಾರಿ ಅಮಾನತು
Next articleತವಣಪ್ಪ ಅಷ್ಟಗಿ ಕಾಂಗ್ರೆಸ್‌ ಸೇರ್ಪಡೆ