ದೇಶದ ಜನರೇ ನಮ್ಮ ರಿಮೋಟ್‌ ಕಂಟ್ರೋಲ್

0
11

ಉತ್ತರ ಕನ್ನಡ: ನಮಗೆ ದೇಶದ ಜನರೇ ರಿಮೋಟ್‌ ಕಂಟ್ರೋಲ್‌ ಎನ್ನುವ ಮೂಲಕ ಕಾಂಗ್ರೆಸ್‌ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಟಾಂಗ್‌ ಕೊಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಬಜರಂಗಬಲಿಗೆ ಜೈ ಎನ್ನುವ ಮೂಲಕ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಕರ್ನಾಟಕವನ್ನು ನಂಬರ್‌ ಒನ್‌ ಮಾಡಲು ಬಿಜೆಪಿ ಸಂಕಲ್ಪ ಮಾಡಿದೆ. ಕರ್ನಾಟಕ ನಂಬರ್‌ ಒನ್‌ ಆಗಬೇಕಾದರೆ ಬಿಜೆಪಿಗೆ ಮತ ಹಾಕಿ ಎಂದರು.
ಇನ್ನು ತಮ್ಮ ಭಾಷಣದಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಹೊಗಳಿದ ಪ್ರಧಾನಿ ಇದು ಪ್ರಾಕೃತಿಕ ಸೌಂದರ್ಯದ ಗಣಿ ಎಂದು ವರ್ಣಿಸಿದರು.

Previous articleರಾಷ್ಟ್ರ ವಿರೋಧಿಗಳೊಂದಿಗೆ ಕಾಂಗ್ರೆಸ್ ಹೊಂದಾಣಿಕೆ
Next articleಆಂಬ್ಯುಲೆನ್ಸ್‌ ಅಪಘಾತ: ಮೂವರು ಸಾವು, ಮೂವರು ಗಂಭೀರ