Home ತಾಜಾ ಸುದ್ದಿ ದುಷ್ಟರ ವಿರುದ್ಧ ಶಿಷ್ಟರ ವಿಜಯದ ಸಂಕೇತ

ದುಷ್ಟರ ವಿರುದ್ಧ ಶಿಷ್ಟರ ವಿಜಯದ ಸಂಕೇತ

0
185

ನವದೆಹಲಿ: ‘ವಿಜಯ ದಶಮಿ ಪ್ರಯುಕ್ತ ರಾಷ್ಟ್ರ ರಾಜಧಾನಿ ನವದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ನಡೆಯುವ ರಾವಣ ಪ್ರತಿಕೃತಿ ದಹನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದರು.
ಶ್ರೀ ರಾಮಲೀಲಾ ಸೊಸೈಟಿ ಆಯೋಜಿಸಿದ 11ನೇ ರಾಮಲೀಲಾ ಕಾರ್ಯಕ್ರಮದ ಇದಾಗಿತ್ತು, ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ರಾಮ ಮಂದಿರ ನಿರ್ಮಾಣವಾಗುತ್ತಿದೆ. ಇದು ನಮ್ಮ ಸಹನೆ ಹಾಗೂ ತಾಳ್ಮೆಗೆ ಸಿಕ್ಕ ಗೆಲುವು, ದುಷ್ಟರ ವಿರುದ್ಧ ಶಿಷ್ಟರ ವಿಜಯದ ಸಂಕೇತವಾಗಿ ಈ ಹಬ್ಬ ಆಚರಿಸಲಾಗುತ್ತಿದೆ ಎಂದರು.