ದಾಖಲೆ ಇಲ್ಲದ 13 ಲಕ್ಷ ರೂ. ವಶ

0
7
ಹಣ

ಮಂಗಳೂರು: ವ್ಯಕ್ತಿಯೊಬ್ಬ ದ್ವಿಚಕ್ರ ವಾಹನದಲ್ಲಿ ದಾಖಲೆಯಿಲ್ಲದೆ, ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಆರೋಪದಲ್ಲಿ ಕುಂದಾಪುರ ಪೊಲೀಸರು 13 ಲಕ್ಷ ರೂ. ವಶಕ್ಕೆ ಪಡೆದ ಘಟನೆ ಮಾ. 29ರಂದು ಕುಂದಾಪುರ ಸಂಗಮ್ ಬಳಿಯ ಚೆಕ್‌ಪೋಸ್ಟ್‌ನಲ್ಲಿ ನಡೆದಿದೆ.
ಮೂಲತಃ ಮಹಾರಾಷ್ಟ್ರದ, ಪ್ರಸ್ತುತ ಕೋಟೇಶ್ವರ ಸಮೀಪದ ನಿವಾಸಿ ದಿಲೀಪ್ ಗೋಡ್ಸೆ (47) ಎಂಬಾತ ತನ್ನ ಬೈಕಿನಲ್ಲಿ ಯಾವುದೇ ದಾಖಲೆಗಳಿಲ್ಲದೆ 13ಲಕ್ಷ ಸಾಗಿಸುತ್ತಿದ್ದ. ಕುಂದಾಪುರ ಸಂಗಮ್ ಜಂಕ್ಷನ್ ಬಳಿ ಪೊಲೀಸ್ ಚೆಕ್‌ಪೋಸ್ಟ್‌ ಬಳಿ ಪೊಲೀಸರು ವಾಹನ ತಪಾಸಣೆಯಲ್ಲಿ ತೊಡಗಿದ್ದಾಗ ಬೈಕ್ ಅಡ್ಡಗಟ್ಟಿ ಪರಿಶೀಲಿಸಿದ್ದು ಹಣ ಸಾಗಾಟ ತಿಳಿದುಬಂದಿದೆ. ವಿಚಾರಣೆ ವೇಳೆ ಈ ಹಣಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ತಿಳಿದುಬಂದಿದ್ದು ವಶಕ್ಕೆ ಪಡೆದ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Previous articleಶೀಘ್ರ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆ
Next articleಪತ್ನಿಗೆ ಹಲ್ಲೆ ಮಾಡಿ ಪತಿ ಸಾವು, ಪತ್ನಿ ಆಸ್ಪತ್ರೆಗೆ ದಾಖಲು