ತೆಲಂಗಾಣ: ರೈಲು ಹರಿದು 60 ಮೇಕೆಗಳು ಸಾವು

0
21

ಹೈದರಾಬಾದ್: ರೈಲಿನಡಿಗೆ ಸಿಲುಕಿ 60 ಮೇಕೆಗಳು ಸಾವನ್ನಪ್ಪಿರುವ ದಾರುಣ ಘಟನೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಕಾರಾಬಾದ್ ಜಿಲ್ಲೆಯ ಧಾರೂರ್ ಮಂಡಲದ ಡೋರ್ನಾಲ್ ಗ್ರಾಮದಲ್ಲಿ ಕಿಷ್ಟಪ್ಪ ಎಂಬವರಿಗೆ ಸೇರಿದ ಸುಮಾರು 60 ಮೇಕೆಗಳು ರೈಲ್ವೇ ಹಳಿಯನ್ನು ದಾಟುತ್ತಿದ್ದವು. ಇದೇ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಬಂದ ರೈಲೊಂದು ಡಿಕ್ಕಿ ಹೊಡೆದ ಪರಿಣಾಮ 60 ಮೇಕೆಗಳು ಸ್ಥಳದಲ್ಲೇ ಸಾವನ್ನಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Previous articleವಿಧಾನ ಪರಿಷತ್​ ಸದಸ್ಯರಾಗಿ ಕಾಂಗ್ರೆಸ್​ನ ಮೂವರು ಪ್ರಮಾಣವಚನ ಸ್ವೀಕಾರ
Next articleಬಿಟ್ ಕಾಯಿನ್: ಮರು ತನಿಖೆ