ಹುಬ್ಬಳ್ಳಿ: ಇಲ್ಲಿನ ಜೆ.ಕೆ. ಸ್ಕೂಲ್ ಮುಂಭಾಗದ ಜಮೀನಿನಲ್ಲಿ ಎರಡು ದಿನಗಳ ಕಾಲ ನಡೆದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಸಣ್ಣ-ಪುಟ್ಟ ಗಾಯಗಳಾದ ಗಾಯಾಳುಗಳಿಗೆ ಹಾಗೂ ದಣಿವಾದವರಿಗೆ ವಿವೇಕಾನಂದ ಆಸ್ಪತ್ರೆ ವೈದ್ಯರ ತಂಡದಿಂದ ತುರ್ತು ಚಿಕಿತ್ಸೆ ನೀಡಲಾಯಿತು.
ಈ ಸಮಯದಲ್ಲಿ ಆಸ್ಪತ್ರೆ ವೈದ್ಯರು ಮಕ್ಕಳು, ವಯಸ್ಕರು ಮತ್ತು ಸಣ್ಣ ಮತ್ತು ಪ್ರಮುಖ ಪ್ರಕರಣಗಳ ಬಗ್ಗೆ ಕಾಳಜಿ ವಹಿಸಿದರು. ಹಿರಿಯ ನಾಗರಿಕರಿಗೆ, ಚಿಕಿತ್ಸೆ ಅಗತ್ಯ ಇದ್ದವರಿಗೆ ಸಕಾಲಕ್ಕೆ ಚಿಕಿತ್ಸೆ ನೀಡಲಾಯಿತು. ತಂಡದಲ್ಲಿ 8 ವೈದ್ಯರು, 10 ನರ್ಸಿಂಗ್ ಸಿಬ್ಬಂದಿ ಮತ್ತು ಡಾ. ರವೀಂದ್ರ, ಡಾ. ರಾಹುಲ್ ಮುಂಗೇಕರ್ ನೇತೃತ್ವ ವಹಿಸಿದ್ದರು.