ರವೀಶ್ ಸಿ.ಆರ್. ಡಿಸಿಪಿಯಾಗಿ ನೇಮಕ
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಕ್ರೈಂ ಅಂಡ್ ಟ್ರಾಫಿಕ್ ನೂತನ ಡಿಸಿಪಿಯಾಗಿ ರವೀಶ್ ಸಿ.ಆರ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಡಿಸಿಪಿಯಾಗಿದ್ದ ಡಾ. ಗೋಪಾಲ ಎಂ. ಬ್ಯಾಕೋಡ್ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಬೆಂಗಳೂರು ಇಲ್ಲಿಗೆ ವರ್ಗಾಯಿಸಲಾಗಿದೆ. ಬೆಂಗಳೂರು ನಗರ ವಿವಿಐಪಿ ಭದ್ರತೆ, ಡಿವೈಎಸ್ಪಿಯಾಗಿದ್ದ ರವೀಶ್ ಸಿ.ಆರ್. ಅವರಿಗೆ ಮುಂಬಡ್ತಿ ನೀಡಿ ಕರ್ನಾಟಕ ಲೋಕಾಯುಕ್ತ ಬೆಂಗಳೂರಿಗೆ ಹೊರಡಿಸಿದ್ದ ಆದೇಶವನ್ನು ಮಾರ್ಪಡಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಹುಧಾ ಅಪರಾಧ ಮತ್ತು ಸಂಚಾರ ವಿಭಾಗಕ್ಕೆ ನೇಮಕ ಮಾಡಲಾಗಿದೆ.