ಬೆಂಗಳೂರು: ಸಂಚಾರ ದಟ್ಟಣೆ ಪ್ರದೇಶವಾದ ಹೆಬ್ಬಾಳ ಜಂಕ್ಷನ್ ಮತ್ತು ಅದರ ಅಕ್ಕಪಕ್ಕದ ಪ್ರದೇಶಗಳ ಸಂಚಾರ ದಟ್ಟಣೆ ಕಡಿಮೆಮಾಡುವ ಉದ್ದೇಶದಿಂದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಇಂದು ಹಿರಿಯ ಅಧಿಕಾರಿಗಳ ಸಭೆ ನಡೆಸಿ ಹಾಗೂ
ನಂತರ ಬೆಂಗಳೂರು ಸಿಟಿ ರೌಂಡ್ಸ್‌ಗೆ ತೆರಳಿದರು. ಹೆಬ್ಬಾಳ ಫ್ಲೈಓವರ್ ಬಳಿ ಇಂದು ಕಾಮಗಾರಿಗಳ ಪರಿಶೀಲನೆ ನಡೆಸಿ ಸಂಚಾರ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ ಅವರು. ಹೆಚ್.ಆರ್.ಬಿ.ಆರ್. ಬಡಾವಣೆಯ ಟೆಲಿಕಾಂ ಲೇಔಟ್‌ನಲ್ಲಿ ಹಾದುಹೋಗುವ ರಾಜಕಾಲುವೆ ಪರಿವೀಕ್ಷಿಸಿ ಬಿಬಿಎಂಪಿಯ ಪೌರಕಾರ್ಮಿಕರನ್ನು ಭೇಟಿ ಮಾಡಿ, ಅವರೊಂದಿಗೆ ಸಮಾಲೋಚನೆ ನಡೆಸಿದರು.
ವಿಮಾನ ನಿಲ್ದಾಣ, ಹೈದರಾಬಾದ್ ಹಾಗೂ ಐಟಿ ಹಬ್‌ಗಳನ್ನು ಸಂಪರ್ಕಿಸುವ ಹೆಬ್ಬಾಳ ಮೇಲ್ಸೇತುವೆ ಅಗಲೀಕರಣಕ್ಕೆ ಸಾಕಷ್ಟು ಬೇಡಿಕೆಗಳು ಕೇಳಿಬಂದಿದ್ದು ಉದ್ದೇಶಿತ ಯೋಜನೆಯ ನೀಲನಕ್ಷೆಗಳನ್ನು ಈ ವೇಳೆ ವೀಕ್ಷಿಸಿದರು.