ಕಾಂಗ್ರೆಸ್‌ನ ಐದು ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ ಟೀಕೆ ಮಾಡುವವರಿಗೆ ತಿರುಗೇಟು ಕೊಟ್ಟಿದ್ದಾರೆ.
ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಸಾಧ್ಯವಿಲ್ಲ ಎಂದಿದ್ರು. ಎಷ್ಟೇ ಕಷ್ಟ ಬಂದ್ರೂ ಗ್ಯಾರಂಟಿ ಯೋಜನೆ ಜಾರಿ ಖಚಿತ. ನಾವು ನುಡಿದಂತೆ ನಡೆಯುತ್ತೇವೆ. ಹೀಗಾಗಿ ವಿರೋಧ ಪಕ್ಷಗಳಿಗೆ ಈಗ ನಡುಕ ಶುರುವಾಗಿದೆ ಎಂದಿದ್ದಾರೆ.
ಜುಲೈ 1ರಿಂದ ಗೃಹ ಜ್ಯೋತಿ ಯೋಜನೆ ಜಾರಿಗೊಳಿಸುತ್ತಿದ್ದೇವೆ. ಅದೇ ರೀತಿ ಉಳಿದ ಎಲ್ಲ ಗ್ಯಾರಂಟಿ ಯೋಜನೆ ಜಾರಿ ಮಾಡುತ್ತೇವೆ. ನೂರಕ್ಕೆ ನೂರು ಗ್ಯಾರಂಟಿ ಯೋಜನೆ ಜಾರಿ ಖಚಿತ ಎಂದಿದ್ದಾರೆ.