ಟಿಕೆಟ್ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು: ರಮೇಶ ಜಾರಕಿಹೊಳಿ

0
15

ಹುಬ್ಬಳ್ಳಿ : ವಿಧಾನ ಸಭಾ ಚುನಾವಣೆಯಲ್ಲಿ ಟಿಕೇಟ್ ನೀಡುವುದು ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಅಥಣಿ ಕ್ಷೇತ್ರಕ್ಕೆ ಕುಮಟಳ್ಳಿ ಅವರಿಗೆ ಟಿಕೇಟ್ ನೀಡುವ ವಿಚಾರವನ್ನು ಪಕ್ಷದ ಹೈಕಮಾಂಡ್ ಜೊತೆ ಗೆ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಹೈ ಕಮಾಂಡ್ ಏನು ತೀರ್ಮಾನ ಮಾಡುತ್ತದೆ ನೋಡೋಣ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಇಲ್ಲಿನ ಆದರ್ಶನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಕ್ಷೇತ್ರದಲ್ಲಿ ಕೆಲ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಆಹ್ವಾನಿಸಲು ಬಂದಿದ್ದೆ ಎಂದರು.
ಮೀಸಲಾತಿ ನಿಗದಿ ನಿರ್ಣಯ ಅತ್ಯುತ್ತಮವಾದುದು. ಎಲ್ಲ ಸಮುದಾಯಕ್ಕೂ ಅನುಕೂಲವಾಗಲಿದೆ ಎಂದರು

Previous articleಕರ್ನಾಟಕದ ಯುವಕರು ಒಲಿಂಪಿಕ್ ನಲ್ಲಿ ಪದಕ ಜಯಿಸಬೇಕು: ಸಿಎಂ
Next articleಎಸ್ಸಿ,ಎಸ್ಟಿ,ಒಬಿಸಿಗೆ ಯಾಮಾರಿಸಿದ್ದೇ ಕಾಂಗ್ರೆಸ್ ಸಾಧನೆ: ಮುಖ್ಯಮಂತ್ರಿ