ಟಗ್ ಬೋಟ್‌ಗೆ ಬೆಂಕಿ

0
10

ಕಾರವಾರ: ಐಎನ್‌ಎಸ್ ಕದಂಬ ನೌಕಾನೆಲೆಯ ಡಾಕ್‌ಯಾರ್ಡ್‌ಗೆ ಯುದ್ಧ ಹಡಗುಗಳನ್ನು ಎಳೆದು ತರುವ ಟಗ್ ಬೋಟ್‌ಗೆ ಬೆಂಕಿ ತಗುಲಿ ಹಾನಿಯಾಗಿದೆ.
ಅರಗಾದಲ್ಲಿರುವ ಡಾಕ್‌ಯಾರ್ಡ್‌ನಲ್ಲಿ ತೇಜ್ ಹೆಸರಿನ ಟಗ್ ಬೋಟ್‌ನ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಮಾತ್ರದಲ್ಲಿ ಬೋಟ್‌ತುಂಬ ಹೊಗೆ ಆವರಿಸಿಕೊಂಡಿದೆ. ತಕ್ಷಣ ನೌಕಾನೆಲೆ ಸಿಬ್ಬಂದಿ ಹಾಗೂ ಕಾರವಾರ ಅಗ್ನಿಶಾಮಕ ದಳದ ಸಿಬ್ಬಂದಿ ತೆರಳಿ ಬೆಂಕಿ ನಂದಿಸಲು ಶ್ರಮಿಸಿದರು.
ಟಗ್ ಬೋಟ್ ಎಂಜಿನ್‌ನಲ್ಲಿ ತಾಂತ್ರಿಕದೋಷದಿಂದಾಗಿ ಈ ರೀತಿ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳಿಗೆ ಹಾನಿಯಾಗಿರುವುದಾಗಿ ನೌಕಾನೆಲೆ ಮೂಲಗಳು ತಿಳಿಸಿವೆ. ಬೃಹತ್ ನೌಕೆಗಳನ್ನು ಡಾಕ್‌ಯಾರ್ಡ್‌ಗೆ ಎಳೆದು ತರಲು ಈ ಟಗ್‌ಗಳು ಸಹಕಾರಿಯಾಗುತ್ತವೆ.

Previous articleಮಹಿಳಾ ಸುರಕ್ಷತೆ ಹಾಗೂ ರೌಡಿಗಳ ಮಟ್ಟ ಹಾಕಲು ಕ್ರಮ
Next articleಹಿಂಡಲಗಾ ಕಾರಾಗೃಹದ ಇಬ್ಬರು ಸಿಬ್ಬಂದಿ ಅಮಾನತು