ಜೆಡಿಎಸ್‌ ಅಭ್ಯರ್ಥಿಗೆ ದಿಗ್ಬಂಧನ

0
14

ಮಂಡ್ಯ: ಜೆಡಿಎಸ್‌ ಅಭ್ಯರ್ಥಿ ಗ್ರಾಮಕ್ಕೆ ಪ್ರವೇಶ ಮಾಡದಂತೆ ಗ್ರಾಮಸ್ಥರು ತಡೆಯೊಡ್ಡಿದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಬಂಡಿಹೊಳೆ ಗ್ರಾಮದಲ್ಲಿ ನಡೆದಿದೆ.
ಕಾಂಗ್ರೆಸ್‌ ಅಭ್ಯರ್ಥಿ ಬಿ.ಎಲ್. ದೇವರಾಜು ಅವರ ಹುಟ್ಟೂರು ಬಂಡಿಹೊಳೆಯಲ್ಲಿ ಪ್ರಚಾರಕ್ಕೆಂದು ಜೆಡಿಎಸ್‌ ಅಭ್ಯರ್ಥಿ ಹೆಚ್.ಎಸ್. ಮಂಜು ತೆರಳಿದ್ದ ವೇಳೆ ವಾಹನ ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಎರಡೂ ಬಣದವರ ನಡುವೆ ತಳ್ಳಾಟ-ನೂಕಾಟ, ವಾಗ್ವಾದ, ಮಾತಿನ ಚಕಮಕಿ ನಡೆದಿದೆ. ಬಳಿಕ ಪೊಲೀಸರ ಮಧ್ಯಸ್ಥಿತಿಯಲ್ಲೂ ಆಕ್ರೋಶ ಶಮನವಾಗದೇ ವಿಧಿ ಇಲ್ಲದೇ ಬಂಡಿಹೊಳೆ ಗ್ರಾಮಕ್ಕೆ ಪ್ರಚಾರಕ್ಕೆ ಹೋಗದೆ ಜೆಡಿಎಸ್‌ ಅಭ್ಯರ್ಥಿ ವಾಪಸ್ಸಾಗಿದ್ದಾರೆ.

Previous articleತಾಕತ್ತಿದ್ದರೆ ಬಜರಂಗದಳ ಬ್ಯಾನ್ ಮಾಡಿ
Next articleಕಾಂಗ್ರೆಸ್ ಪ್ರಣಾಳಿಕೆಗೆ ಹಿಂಜಾವೇ ಖಂಡನೆ