ಜಾಗತಿಕ ಜನಪ್ರಿಯತೆ ಮೋದಿ ನಂಬರ್ ಒನ್

0
12

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಅವರು ಕೈಗೊಂಡಿರುವ ಕಾರ್ಯಕ್ರಮಗಳಿಗೆ ಚೆನ್ನಾಗಿವೆ ಎಂದು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾರ್ನಿಂಗ್ ಕನ್‌ಸಲ್ಟ್ ಡೈಲಿ ಗ್ಲೋಬಲ್ ನ್ಯೂಸ್ ಲೆಟರ್ ಆ. ೧೭-೨೩ರ ಅವಧಿಯಲ್ಲಿ ನಡೆಸಿರುವ ಸಮೀಕ್ಷೆಯಲ್ಲಿ ಭಾರತದಲ್ಲಿ ನರೇಂದ್ರ ಮೋದಿ ಅವರ ಕಾರ್ಯಕ್ರಮಗಳು ಸರಿಯಾಗಿವೆ ಎಂದು ಶೇ.೭೫ರಷ್ಟು ಜನ ಅನುಮೋದನೆ ನೀಡಿದ್ದು, ಶೇ. ೨೦ರಷ್ಟು ನಿರಾಕರಿಸಿದ್ದಾರೆ. ಶೇ.೫ರಷ್ಟು ಜನ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ.
ಇದೇ ರೀತಿ ೨೨ ದೇಶಗಳಲ್ಲಿ ನಾಯಕರ ಜನಪ್ರಿಯತೆಯನ್ನು ಅಳೆಯಲಾಗಿದೆ. ಮೆಕ್ಸಿಕೋದ ಆಂಡ್ರಿಸ್ ಮಾನ್ಯುಯೆಲ್ ಲೊಪೆಜ್ ಒಬ್ರಡಾರ್ ಶೇ.೬೩, ಆಸೇಲಿಯಾದ ಆಂಥೋನಿ ಅಲ್ಬನೀಸ್ ಶೇ.೫೮, ಸಿಜರ್‌ಲ್ಯಾಂಡ್‌ನ ಇಗ್ನಾಜಿಯೋ ಕಾಸಿಸ್ ಶೇ.೫೨ ಮತ್ತು ಇಟಲಿಯ ಮಾರಿಯೋ ಡ್ರಾಗಿ ಶೇ.೫೪ರಷ್ಟು ಜನರ ಅನುಮೋದನೆ ಪಡೆದುಕೊಳ್ಳುವಲ್ಲಿ ಯಶಸಿಯಾಗಿದ್ದಾರೆ.

Previous articleಪಾಕ್‌ನಲ್ಲಿ ಪ್ರವಾಹ 1000 ಜನ ಬಲಿ, ತುರ್ತುಸ್ಥಿತಿ ಘೋಷಣೆ
Next articleಮರಾಠ ಬ್ರಿಗೇಡ್ ಜೊತೆ ಮೈತ್ರಿ