ಜನಾರ್ಧನ ರೆಡ್ಡಿ ವಜ್ರ: ಅರುಣಾಲಕ್ಷ್ಮೀ

ಅರುಣಾಲಕ್ಷ್ಮೀ

ಚಿತ್ರದುರ್ಗ: ಜನರಿಗೆ ಒಳಿತನ್ನು ಮಾಡಲು ಒಳ್ಳೆಯ ಮನಸಿರಬೇಕು. ಯಾರು ಏನೇ ಆರೋಪ‌ ಮಾಡಿದರು ಜನಾರ್ಧನ ರೆಡ್ಡಿ ವಜ್ರ. ನಮ್ಮ ಪತಿ ಮಂತ್ರಿಯಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದು ಅರುಣಾಲಕ್ಷ್ಮಿ ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ನೆಹರು ಮೈದಾನದಲ್ಲಿ ನಡೆದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಅವರಿಗೆ ಎಷ್ಟೇ ಕಷ್ಟ ಬಂದರು ಗೆದ್ದು ಬಂದಿದ್ದೇವೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮೇಲೆ‌ ಎಲ್ಲರ ಆಶೀರ್ವಾದ ಇರಲಿ. ಸಾಮಾಜಿಕ ನ್ಯಾಯದ ಮೇಲೆ ನಾವು ಪಕ್ಷ‌ ಕಟ್ಟಿದ್ದೇವೆ. ಆಡಳಿತ ನಮ್ಮದು ಅಧಿಕಾರ‌ ನಿಮ್ಮದು. ಬಸವಣ್ಣನವರ ಸಿದ್ಧಾಂತದ ಮೇಲೆ ನಮ್ಮ ಪಕ್ಷ ನಿಂತಿದೆ ಎಂದು ಅವರು ಹೇಳಿದ್ದಾರೆ.