ಜನಾರ್ದನ್ ರೆಡ್ಡಿ ಅವರನ್ನು ರಾಕ್ಷಸನಿಗೆ ಹೋಲಿಸಿದ ಭರತ್

0
19

ಬಳ್ಳಾರಿ: ಬಳ್ಳಾರಿಯನ್ನು ರಾಕ್ಷಸರಿಂದ ರಕ್ಷಿಸಲು ಕಾಂಗ್ರೆಸ್‌ಗೆ ಮತ ನೀಡಿ ಎಂದು ಕಾಂಗ್ರೆಸ್ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಭರತ್ ರೆಡ್ಡಿ ಕೋರಿದ್ದಾರೆ.
ನಗರದ ಕಣೆಕಲ್ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡ ಬಹಿರಂಗ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಈ ವೇದಿಕೆಯಲ್ಲಿ ನಾನು ನೀಚರ ಹೆಸರು ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ. ಅಂತಹ ನೀಚ, ರಾಕ್ಷಸರು ಮತ್ತೆ ಜನಸಾಮಾನ್ಯರ ಹಣ ದೋಚಲು ಬಂದಿದ್ದಾರೆ. ಅಂತಹ ನೀಚರಿಂದ ಬಳ್ಳಾರಿಗರನ್ನು ರಕ್ಷಿಸಲು ನನಗೆ ಮತ ನೀಡಿ ಎಂದರು.
ನನ್ನ ಆಸೆ ಬಳ್ಳಾರಿಯಲ್ಲಿ ಒಬ್ಬೇ ಒಬ್ಬ ಸಹೋದರ, ಸಹೋದರಿ ಮನೆ ಇಲ್ಲದವರು ಇರಬಾರದು. ಪ್ರತಿಯೊಬ್ಬ ಮಹಿಳೆಯ ರಾಜ್ಯದ ಮೂಲೆ ಮೂಲೆಗೂ ಉಚಿತ ಬಸ್ ಪ್ರಯಾಣ ಮಾಡಲು ಅನುಕೂಲ ಮಾಡಿ ಕೊಡುತ್ತೇನೆ ಎಂದು ಅವರು ತಿಳಿಸಿದರು.
ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಮೇಯರ್ ತ್ರಿವೇಣಿ, ಪಾಲಿಕೆ ಸದಸ್ಯರು ಇದ್ದರು.

Previous articleಆಂಜನೇಯನ ಗದಾ ಪ್ರಹಾರ 13ರಂದು ನೋಡಿ
Next articleಮಣಿಕಂಠ ರಾಠೋಡ್ ವಿರುದ್ಧ ಗೋವಾದಲ್ಲಿ ದೂರು ದಾಖಲು