ಜನರ ನಿದ್ದೆಗೆಟಿಸಿದ್ದ ಚಿರತೆ ಸೆರೆ!

0
18

ದಾವಣಗೆರೆ: ಕಳೆದ 15 ದಿನಗಳಿಂದ ಚನ್ನಗಿರಿ ಭಾಗದ ಜನರ ನಿದ್ದೆಗೆಡಿಸಿದ್ದ ಚಿರತೆ ಅಂತೂ ಸೆರೆ ಸಿಕ್ಕಿದೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ಗರಗ ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಇಡಲಾಗಿದ್ದ ಬೋನಿಗೆ ಚಿರತೆ ಬಂಧಿಯಾಗಿದೆ‌. ಕಳೆದ ಹದಿನೈದು ದಿವಸಗಳಿಂದ ಗ್ರಾಮದ ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ ಏಳು ಶ್ವಾನಗಳನ್ನು ಬಲಿ ಪಡೆದಿತ್ತು.
ಗ್ರಾಮದ ಜನರು ಅರಣ್ಯ ಇಲಾಖೆಗೆ ಚಿರತೆ ಸೆರೆ ಹಿಡಿಯುವಂತೆ ಮನವಿ ಮಾಡಿದ್ದರು. ಚಿರತೆ ಹೆಜ್ಜೆ ಗುರುತು ಪತ್ತೆ ಮಾಡಿ ಬೋನು ಇಟ್ಟಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಬೋನಿನ ಒಳಗಡೆ ಶ್ವಾನ ಇರಿಸಿ ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿ ಕಾರ್ಯಚರಣೆ ನಡೆಸಿದ್ದು, ಚಿರತೆ ಸೆರೆ ಹಿನ್ನಲೆ ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಚಿರತೆಯನ್ನ ಭದ್ರ ದಟ್ಟಾರಣ್ಯದಲ್ಲಿ ಬಿಡುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

Previous articleನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ನೂರಾರು‌ ರೈತರಿಂದ ಹೆದ್ದಾರಿ ತಡೆ
Next article81 ನಾಡಬಾಂಬ್‌ ಪತ್ತೆ