ಜನಪ್ರಿಯ ಹೆಸರುಗಳೊಂದಿಗೆ ರೈಲ್ವೆ ನಿಲ್ದಾಣಗಳ ಜೋಡಣೆ

0
9

ಹುಬ್ಬಳ್ಳಿ: ಭಾರತೀಯ ರೈಲ್ವೆ ಪ್ರಯಾಣಿಕರಿಗಾಗಿ ಜನಪ್ರಿಯ ಪ್ರದೇಶದ ಹೆಸರುಗಳ ನಿಲ್ದಾಣದೊಂದಿಗೆ ಜೋಡಿಸುವ ಹೊಸ ವಿಧಾನವನ್ನು ಜುಲೈ ೨೧ ರಿಂದ ರೈಲ್ವೆ ಇಲಾಖೆ ಪ್ರಸ್ತುತ ಪಡಿಸುತ್ತಿದೆ. ಇದರಿಂದ ಜನಪ್ರಿಯ ಪ್ರದೇಶ/ನಗರಗಳೊಂದಿಗೆ ಸಣ್ಣ ನಿಲ್ದಾಣಗಳನ್ನು ಗುರುತಿಸುವುದು ಈಗ ಮತ್ತಷ್ಟು ಸುಲಭವಾಗಲಿದೆ. ರೈಲು ನಿಲ್ದಾಣಗಳನ್ನು ಪ್ರಯಾಣಿಕರು ಮಾತ್ರವಲ್ಲದೆ ಪ್ರಯಾಣ ಬೆಳೆಸುವವರಿಗೆ ಸರಿಯಾದ ಸ್ಥಳ ಗುರುತಿಸಬಹುದಾಗಿದೆ.
ಕೆಲವೊಂದು ಸಣ್ಣ ನಿಲ್ದಾಣಗಳು ಜನಪ್ರಿಯ ನಗರ ಮತ್ತು ಪ್ರದೇಶಗಳೊಂದಿಗೆ ಸಂಪರ್ಕ ಹೊಂದಿವೆ. ಉದಾ: ಸಾರನಾಥನ್ನು ಬನಾರಸ್‌ನೊಂದಿಗೆ, ಸಾಬರಮತಿಯನ್ನು ಅಹಮದಾಬಾದ್ ನಗರದೊಂದಿಗೆ, ಪನ್ವೇಲ್‌ನ್ನು ಮುಂಬೈಯೊಂದಿಗೆ ಸೇರಿಸುವ ಮೂಲಕ ಸಂಪರ್ಕಿಸಲಾಗಿದೆ.
ಈ ಹೊಸ ವಿಧಾನವು ಪ್ರಯಾಣಿಕರಿಗೆ ಒಳ್ಳೆಯ ಯೋಜನೆ ಮತ್ತು ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ನಗಳಲ್ಲಿ ಟಿಕೆಟ್ ಬುಕಿಂಗ್ ಮಾಡುವ ಸಂದರ್ಭದಲ್ಲಿ ಸುಲಭವಾಗಿ ಗುರುತಿಸಲು ಸಹಾಯವಾಗಲಿದ್ದು, ಇದರಿಂದ ಪ್ರವಾಸಿಗರಿಗೆ ನಿಲ್ದಾಣಗಳನ್ನು ಹುಡುಕುವುದು ಹಾಗೂ ಉಪನಾಮವಿರುವ ನಗರಗಳನ್ನು ಸಂಪರ್ಕಿಸುವ ರೈಲು ನಿಲ್ದಾಣಗಳಿಗೆ ಲಿಂಕ್ ಮಾಡುವುದು ಮತ್ತಷ್ಟು ಸುಲಭವಾಗಲಿದ್ದು, ಇದು ೨೧.೦೭.೨೦೨೩ ರಿಂದ ಲಭ್ಯವಾಗಲಿದೆ.
ಈ ಯೋಜನೆಯಿಂದ ಉಪನಗರಗಳನ್ನು ಸಂಪರ್ಕಿಸುವ ರೈಲು ನಿಲ್ದಾಣಗಳಿಗೆ ಸಹಾಯವಾಗಲಿದೆ. ಉದಾ: ನೊಯ್ಡಾದಿಂದ ನವದೆಹಲಿಗೆ ಲಿಂಕ್ ಮಾಡಿದೆ. ಕೆಲವೊಂದು ಜನಪ್ರಿಯ ಹೆಸರಿನ ರೈಲು ನಿಲ್ದಾಣದ ಹೆಸರುಗಳಿಗಿಂತ ಭಿನ್ನವಾಗಿರುತ್ತವೆ. ಆದರೆ, ಪ್ರಯಾಣದಲ್ಲಿರುವವರಿಗೆ ಗೊಂದಲ ಉಂಟಾಗಲಿದ್ದು, ಈಗ ಲಿಂಕ್ ಮಾಡುವುದರಿಂದ ಅವರಿಗೆ ಸುಲಭವಾಗಲಿದೆ. ಈ ಹೊಸ ತಂತ್ರಜ್ಞಾನದ ಅಪ್ಲಿಕೇಶನ್ ಬದಲಾವಣೆ ಮಾಡಲಾಗಿದೆ. ೧೭೫ ಜನಪ್ರಿಯ ನಗರ/ಪ್ರದೇಶಗಳನ್ನು ೭೨೫ ನಿಲ್ದಾಣಗಳೊಂದಿಗೆ ಲಿಂಕ್ ಮಾಡಲಾಗಿದೆ. ಈ ಬದಲಾವಣೆಗಳಿಂದ ಇ-ಟಿಕೆಟ್ ಬುಕಿಂಗ್ ವೆಬ್‌ಸೈಟ್‌ನಲ್ಲಿ ನಿಲ್ದಾಣದ ಹುಡುಕಾಟ ಸುಲಭವಾಗಿ ಎಲೆಕ್ಟ್ರಾನಿಕ್ ರಿಸರ್ವೇಶನ್ ಸ್ಲಿಪ್‌ನಲ್ಲಿ ಪ್ರದರ್ಶಿಸಲಾಗುತ್ತದೆ.
ಪ್ರವಾಸಿಯ ಪ್ರಮುಖ ಸ್ಥಳಗಳಾದ ಕಾಶಿ, ಖಾತು ಶ್ಯಾಮ್, ಬದರಿನಾಥ್, ಕೇದಾರನಾಥ, ವೈಷ್ಣೋದೇವಿ ಸೇರಿದಂತೆ ಇನ್ನಿತರ ಸಮೀಪದ ನಿಲ್ದಾಣಗಳ ನಕ್ಷೆಯ ಲಿಂಕ್ ಮಾಡಲಾಗಿದೆ. ಪ್ರಯಾಣಿಕರ ಪ್ರಾದೇಶಿಕತೆಗೆ ಆದ್ಯತೆ ಮತ್ತು ಹೆಮ್ಮೆ ಮೂಡಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

Previous articleರೈಲ್ವೆ ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ ʻಎಕಾನಮಿ ಮೀಲ್ಸ್’
Next articleಮಹಾ ಮಳೆ: ಪ್ರವಾಹದ ಭೀತಿಯಲ್ಲಿ ಬೆಳಗಾವಿ ಜಿಲ್ಲೆ