ಬಳ್ಳಾರಿ:ನಾವು ಈ ಚುನಾವಣೆಯಲ್ಲಿ ಗೆಲ್ಲುವುದಿಲ್ಲ. 2 ಅಥವಾ 3ನೆಯ ಸ್ಥಾನಕ್ಕೆ ಬರಲಿದ್ದೇವೆ ಎಂದು ಜೆಡಿಎಸ್ ಬಳ್ಳಾರಿ ನಗರ ಕ್ಷೇತ್ರದ ಅಭ್ಯರ್ಥಿ ಅನಿಲ್ ಲಾಡ್ ಹೇಳಿಕೆ ನೀಡಿದ್ದಾರೆ.
ನಗರದ ಮಾರ್ಚೆಡ್ ಹೋಟೆಲ್ ನಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರು ಎಲ್ಲಾ ಪಕ್ಷದವರ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ತಮ್ಮ ಮತವನ್ನು ತಮಗೆ ಇಷ್ಟ ಬಂದ ಪಕ್ಷಕ್ಕೆ ನೀಡಲಿದ್ದಾರೆ ಎಂದರು.
ಮೂರು ಪಕ್ಷಗಳ ಪೈಕಿ ನಾವು ಉತ್ತಮ ಸ್ಥಿತಿಯಲ್ಲಿ ಇದ್ದೇವೆ. ನಾವು ಖಂಡಿತಾ ಗೆಲುವು ಕಾಣಲ್ಲ. ಸುಳ್ಳು ಹೇಳಲ್ಲ ಎಂದರು.
ನನ್ನ ಲೆಕ್ಕಾಚಾರದ ಪ್ರಕಾರ ನಾವು 30 ಸಾವಿರಕ್ಕೂ ಅಧಿಕ ಮತ ಪಡೆಯಲು ಸಮರ್ಥ ಇದ್ದೇವೆ. ಅದಕ್ಕೂ ಕಡಮೆ ಬಂದರೆ ನಾನು ಶಾಸಕ ಕ್ಷೇತ್ರಕ್ಕೆ ಸ್ಪರ್ಧೆ ಮಾಡುವುದಿಲ್ಲ ಎಂದು ಅವರು ತಿಳಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಸೋಮಲಿಂಗನಗೌಡ, ರೋಶನ್ ಭಾಷಾ, ವಾದಿರಾಜ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಇದ್ದರು.