ಚಂದ್ರಯಾನ ಯಶಸ್ಸಿಗೆ ಹೋಮ, ಪ್ರಾರ್ಥನೆ, ವಿಶೇಷ ಪೂಜೆ

0
15

ಚಂದ್ರಯಾನ-3ರ ನೌಕೆ ಚಂದ್ರನ ಅಂಗಳಕ್ಕೆ ಕಾಲಿಡಲು ಕೌಂಟ್‌ಡೌನ್ ಶುರುವಾಗಿದ್ದು, ಯೋಜನೆ ಯಶಸ್ವಿಗೆ ದೇಶದ ಮೂಲೆ ಮೂಲೆಯಲ್ಲಿ ಸರ್ವಧರ್ಮೀಯರೂ ಶುಭ ಹಾರೈಸುತ್ತಿದ್ದಾರೆ.
ರಾಜ್ಯದಲ್ಲೂ ಹೋಮ-ಹವನ, ಪ್ರಾರ್ಥನೆ, ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಚಂದ್ರಯಾನ-3ರ ಯಶಸ್ಸಿಗೆ ಪ್ರಾರ್ಥಿಸಲಾಗುತ್ತಿದೆ.
ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3 ನೌಕೆಯ ವಿಕ್ರಮ್ ಲ್ಯಾಂಡರ್ ಇಳಿಸುವ ಈ ಮಹತ್ವದ ಕ್ಷಣವನ್ನ ಕಣ್ತುಂಬಿಕೊಳ್ಳಲು ಜನ ಕಾತುರವಾಗಿದ್ದಾರೆ. ಪ್ರಗ್ಯಾನ್ ರೋವರ್‌ನ್ನು ಹೊತ್ತ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿದ್ದು, ದಕ್ಷಿಣ ಧ್ರುವದ ಮೇಲೆ ಸಂಜೆ 6 ಗಂಟೆ 4ನಿಮಿಷಕ್ಕೆ ಯಾವುದೇ ಅಡೆತಡೆ ಇಲ್ಲದೇ ಚಂದ್ರನ ಅಂಗಳದಲ್ಲಿ ಇಳಿಯುವ ಮೂಲಕ ಇತಿಹಾಸ ನಿರ್ಮಿಸುವ ಭರವಸೆ ಮೂಡಿಸಿದೆ.

Previous articleಚಂದ್ರ ಸ್ಪರ್ಶಕ್ಕೆ ವಿಕ್ರಮನ ಕಾತರ
Next articleಕಾವೇರಿ ನೀರಿಗಾಗಿ ಮಂಡ್ಯದಲ್ಲಿ ಉಪವಾಸ ಸತ್ಯಾಗ್ರಹ