ಗ್ರಾಪಂ ಅಧ್ಯಕ್ಷನ ಬರ್ಬರ ಹತ್ಯೆ

0
24
Murder

ಕಲಬುರಗಿ: ಅಫಜಲಪುರ ತಾಲೂಕಿನ ಮದರಾ ಬಿ. ಗ್ರಾಪಂ ಅಧ್ಯಕ್ಷ ಗೌಡಪ್ಪಗೌಡ ಬಿರಾದಾರ (46) ಅವರನ್ನು ದುಷ್ಕರ್ಮಿಗಳು ಮಾರಕಾಸ್ರ್ತಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ತಾಲೂಕಿನ ಚವಡಾಪುರ ಬಸ್ ನಿಲ್ದಾಣದ ಹತ್ತಿರದಲ್ಲಿ ಬೆಳಿಗ್ಗೆ 10:45 ಕ್ಕೆ ನಡೆದಿದೆ.
ಮೃತ ಗೌಡಪ್ಪಗೌಡ 5 ಬಾರಿ ಗ್ರಾಮ ಸದಸ್ಯರಾಗಿ ಆಯ್ಕೆಯಾಗಿದ್ದರು ಕೆಲ ದಿನಗಳ ಹಿಂದೆ ಅದ್ಯಕ್ಷರಾಗಿಯೂ ಕೂಡಾ ಆಯ್ಕೆಯಾಗಿದ್ದರು. ಘಟನೆಯೂ ದೇವಲ್ ಗಾಣಗಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹಾಡಹಗಲೇ ಕೊಲೆ ನಡೆದಿದ್ದರಿಂದ ಜನ ಬೆಚ್ಚಿಬಿದ್ದಿದೆ.
ಈ ಬಗ್ಗೆ ಶಾಸಕ ಎಂ.ವೈ ಪಾಟೀಲ್ ಸುದ್ದಿಗೋಷ್ಠಿ ನಡೆಸಿ ತೀವ್ರವಾಗಿ ಖಂಡಿಸಿ ಸಿಐಡಿ ತನಿಖೆ ಒಪ್ಪಿಸುವಂತೆ ಆಗ್ರಹಿಸಿದ್ದಾರೆ.

Previous articleಪರಶುರಾಮ ಪ್ರತಿಮೆ ದಿಢೀರ್ ಮಾಯ!
Next articleಹಿರಿಯ ಪತ್ರಕರ್ತ ಕೆ.ಎಸ್. ಸಚ್ಚಿದಾನಂದ ಮೂರ್ತಿ ಇನ್ನಿಲ್ಲ