ಇಳಕಲ್: ನಗರದ ಯಾಕ್ಟೀವ್ ಕಿಡ್ಸ್ ನರ್ಸರಿ ಶಾಲೆಯಲ್ಲಿ ಸೋಮವಾರದಂದು ಮಕ್ಕಳಿಗೆ ಕೃಷ್ಣ ರಾಧೆಯರ ವೇಷಗಳನ್ನು ಹಾಕಲಾಗಿತ್ತು. ಶಾಲೆಯ ಆಡಳಿತ ಮಂಡಳಿ ಸಿಬ್ಬಂದಿ ವರ್ಗ ಮತ್ತು ಪಾಲಕರು ಮಕ್ಕಳಿಗೆ ಸುಂದರವಾದ ವೇಷಭೂಷಣ ಹಾಕಿ ಮುದ್ದು ಮುದ್ದಾಗಿ ಕಾಣುವಂತೆ ಶೃಂಗಾರ ಮಾಡಿ ಖುಷಿಪಟ್ಟರು. ಲಕ್ಷ್ಮೀ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಮಂಜುಳಾ ಗರಡಿಮನಿ ವೇಷಭೂಷಣ ಸ್ಪರ್ಧೆಗೆ ಚಾಲನೆ ನೀಡಿದರು.