ಗಣೇಶ ವಿಸರ್ಜನೆ ವೇಳೆ ಚೂರಿ ಇರಿತ

0
26

ಹಾವೇರಿ: ಗಣಪತಿ ಮೂರ್ತಿ ವಿಸರ್ಜನೆ ವೇಳೆ ಹಿಂದು ಯುವಕರ ಮೇಲೆ ಚೂರಿ ಇರಿದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ನಡೆದಿದೆ.
ಕಾಕಿ ಗಲ್ಲಿಯ ಗಣಪತಿ ಮೆರವಣಿಗೆ ದುರ್ಗಾ ಸರ್ಕಲ್‌ ಬಳಿ ಬಂದಾಗ ಮುಸ್ಲಿಂ ಯುವಕರು ಇಬ್ಬರಿಗೆ ಚೂರಿ ಇರಿದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ದುರ್ಗಾ ವೃತ್ತದಲ್ಲಿರುವ ಮಸೀದಿ ಎದುರು ಹಿಂದು ಯುವಕರು ಪ್ರತಿಭಟನೆಗೆ ಮುಂದಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಸ್ಥಳಕ್ಕೆ ಎಸ್ಪಿ ದೌಡಾಯಿಸಿದ್ದು ನೂರಾರು ಪೊಲೀಸರು ಸರ್ವಗಾವಲು ಹಾಕಿದ್ದಾರೆ.

ಗಣೇಶ ವಿಸರ್ಜನೆ
Previous articleಎಆರ್‌ಟಿಓಗೆ 4 ವರ್ಷ ಜೈಲು, 63 ಲಕ್ಷ ರೂ. ದಂಡ
Next articleಹಂಚಿ ತಿನ್ನದಿರೆ ಅಚ್ಯುತನೊಪ್ಪ…