ಹುಬ್ಬಳ್ಳಿ: ನಗರದಲ್ಲಿ ಸಾರ್ವಜನಿಕ ಗಣೇಶ ಉತ್ಸವದ ಪೆಂಡಾಲ್‌ಗಳಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಾಗೂ ನಶೆ ಆಗುವ ಗುಟ್ಕಾ ವಾಣಿಜ್ಯ ಜಾಹೀರಾತುಗಳು ಬ್ಯಾನರ್‌ಗಳನ್ನು ಅಳವಡಿಸಿದ್ದು, ಇದು ಸಾರ್ವಜನಿಕರಿಗೆ ಗುಟ್ಕಾದ ಉತ್ಸವವೊ ಅಥವಾ ಗಣಪತಿ ಉತ್ಸವವೊ ಎಂಬುದು ಭಕ್ತರಿಗೆ ತೋಚದಂತಾಗಿದೆ ಎಂದು ಗಜಾನನ ಮಹಾ ಮಂಡಳದ ಅಧ್ಯಕ್ಷ ಡಿ. ಗೋವಿಂದರಾವ್ ಕಿಡಿ ಕಾರಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಗುಟ್ಕಾ ಕಂಪನಿಯವರು ಮಹಾನಗರ ಪಾಲಿಕೆಯಿಂದ ಜಾಹೀರಾತುಗಳನ್ನು ಅಳವಡಿಸಲು ಅನುಮತಿ, ಪರವಾನಗಿ ಸಹ ಪಡೆದಿರುವುದಿಲ್ಲ. ಜಾಹೀರಾತು ವಿಭಾಗದ ಅಧಿಕಾರಿಗಳಿಗೆ ಒಳಒಪ್ಪಂದ ಮಾಡಿಕೊಂಡಿರುವುದು ನಮಗೆ ಸಂಶಯ ವ್ಯಕ್ತವಾಗುತ್ತಿದೆ.
ಪೆಂಡಾಲ್‌ಗಳ ಮೇಲೆ ಅಳವಡಿಸಿರುವ ಗುಟ್ಕಾ ಜಾಹೀರಾತು ತೆರವುಗೊಳಿಸುವಂತೆ ಹು-ಧಾ ಆಯುಕ್ತರಿಗೆ ೨೪ ಗಂಟೆ ಮಹಾಮಂಡಳವು ಗಡುವ ನೀಡಲಾಗಿದೆ. ಇದಕ್ಕೆ ಆಯುಕ್ತರು ಒಪ್ಪಿ ತೆರವುಗೊಳಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಒಂದು ವೇಳೆ ಪೆಂಡಾಲ್‌ಗಳಲ್ಲಿ ಅಳವಡಿಸಿರುವ ಗುಟ್ಕಾ ಜಾಹೀರಾತು ತೆರವುಗೊಳಿಸದ್ದಿದರೆ ಮಹಾಮಂಡಳದಿಂದ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.