ಗಡಿಯಾಚೆಯಿಂದ ಊರೀಚೆಗೆ ಬರುತ್ತಿದಾಳೆ ಶಿವಮ್ಮ

0
23

ಬೆಂಗಳೂರು: ಗಡಿ ಯಾಚೆಗಿನ ಚಿತ್ರೋತ್ಸವಗಳಿಂದ ಊರೀಚೆಗಿನ ಚಿತ್ರಮಂದಿರಗಳಿಗೆ ಶಿವಮ್ಮ ಬರುತ್ತಿದಾಳೆ ಸ್ವಾಗತಿಸಿ ಎಂದು ನಟ ನಿರ್ಮಾಪಕ ರಿಷಭ್ ಶೆಟ್ಟಿ ಹೇಳಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ ಮಾಡಿರುವ ಅವರು ತಮ್ನ ಸಂಸ್ಥೆಯ ಮತ್ತೊಂದು ಸಿನಿಮಾ ಬಿಡುಗಡೆ ವಿಷಯವನ್ನು ಹಂಚಿಕೊಂಡಿದ್ದಾರೆ.

ಕೊಪ್ಪಳ ಜಿಲ್ಲೆ ಕುಕನೂರು ತಾಲ್ಲೂಕಿನ ಯರೆಹಂಚಿನಾಳ ಗ್ರಾಮದ ಶಿವಮ್ಮ ಎಂಬ ಮಹಿಳೆಯೊಬ್ಬರು ನೆಟ್‌ವರ್ಕಿಂಗ್‌ ಮಾರ್ಕೆಟಿಂಗ್‌ ಮೂಲಕ ಸಾಧನೆ ಮಾಡಲು ಹೊರಟ ಚಿತ್ರಣವನ್ನು
ಜಯಶಂಕರ್ ಆರ್ಯರ್ ತಮ್ಮ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ಹೇಳಹೊರಟ್ಟಿದ್ದಾರೆ.
ಗ್ರಾಮೀಣ ಭಾಗದ ಜನರ ಕಥೆಯನ್ನು ಹೊಂದಿರುವ ಈ ಚಿತ್ರದ ಬಹುಪಾಲು ತಾರಾಗಣ ಯರೇಹಂಚಿನಾಳ ಗ್ರಾಮದವರೇ ಎನ್ನುವುದು ವಿಶೇಷ. ಈಗಾಗಲೇ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಸಿನಿಮಾ ಪ್ರಶಸ್ತಿಗಳನ್ನು ಗೆದ್ದಿದ್ದು. ಭಾರೀ ಮೆಚ್ಚುಗೆ ಗಳಿಸಿದೆ.

ಈ ‘ಶಿವಮ್ಮ’ ಸಿನಿಮಾ ಜೂನ್ 14ಕ್ಕೆ ತೆರೆಗೆ ಬರಲಿದೆ.

ಈ ಚಿತ್ರದಲ್ಲಿ ಶಿವಮ್ಮ ತನ್ನ ಊರಿನ ಮಹಿಳೆಯರಿಗೆ ತನ್ನದೇ ಭಾಷೆಯಲ್ಲಿ, ತನ್ನದೇ ರೀತಿಯಲ್ಲಿ ಹೊಸ ವ್ಯಾಪಾರದ ಕುರಿತು ಮಾಹಿತಿ ನೀಡುವ ಚಿತ್ರಣವಿದ್ದು. “ಐ ವಿಲ್‌ ಡು ಇಟ್‌” ಎಂದು ಜನರಿಗೆ ಪ್ರೋತ್ಸಾಹ ನೀಡುವ ಯರೇಹಂಚಿನಾಳ ಶಿವಮ್ಮ ಚಿತ್ರದ ಟ್ರೈಲರ್ ಈಗಲೇ ನೋಡಿ…


Previous articleಲಾಡ್ ಕ್ಷೇತ್ರದಲ್ಲೆ ಜೋಶಿಗೆ ಲೀಡ್
Next articleಗೆಲುವಿನತ್ತ ರಾಘವೇಂದ್ರ