ಖ್ಯಾತ ನಿರ್ದೇಶಕ, ನಟ ಮನೋಬಾಲಾ ನಿಧನ

0
24

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಮನೋಬಾಲಾ(69) ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಚೆನ್ನೈನ ಮನೆಯಲ್ಲಿ ನಿಧನರಾದರು.
ಭಾರತಿರಾಜ ಅವರ ‘ಪುತಿಯ ವಾರ್ಪುಗಳ್’ ಚಿತ್ರದ ಮೂಲಕ ನಟರಾಗಿ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದ ಮನೋಬಾಲಾ, ಆನಂತರ ಭಾರತಿಪುರ ನಿರ್ದೇಶನದ ಚಿತ್ರಗಳಿಗೆ ಸಹಾಯ ನಿರ್ದೇಶಕರೂ ಆಗಿದ್ದರು. ಈವರೆಗೂ ನಾಲ್ಕು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾದಲ್ಲಿ
ಪೋಷಕ ಪಾತ್ರ, ಹಾಸ್ಯ ಪಾತ್ರಗಳಲ್ಲಿ ನಟಿಸಿ ಅಪಾರ ಮೆಚ್ಚುಗೆ ಪಡೆದುಕೊಂಡಿದ್ದರು.

Previous articleಆಂಬ್ಯುಲೆನ್ಸ್‌ ಅಪಘಾತ: ಮೂವರು ಸಾವು, ಮೂವರು ಗಂಭೀರ
Next articleಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಗಳ ಉಚ್ಛಾಟನೆ