ಕ್ಷೀರಧಾರೆ ಯೋಜನೆಗೆ ದಶಮಾನ

0
16

ಬೆಂಗಳೂರು: ಕ್ಷೀರಧಾರೆ ಯೋಜನೆಗೆ ಇಂದಿಗೆ ಹತ್ತು ವರ್ಷಗಳು ತುಂಬಿದ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್‌ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ, ಅವರು ತಮ್ಮ ಟ್ವೀಟ್‌ ಸಂದೇಶದಲ್ಲಿ “ಕರ್ನಾಟಕದ ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಣೆಯ ಜೊತೆಗೆ ಹೈನುಗಾರಿಕೆಯನ್ನು ಮತ್ತಷ್ಟು ಲಾಭದಾಯಕ ಉದ್ಯೋಗವಾಗಿಸಿ, ಅವರನ್ನು ಪ್ರೋತ್ಸಾಹಿಸುವ ಉದ್ದೇಶದೊಂದಿಗೆ 2013ರ ಆಗಸ್ಟ್ 1 ರಂದು ನಮ್ಮ‌ ಸರ್ಕಾರವು ಶಾಲಾ ಮಕ್ಕಳಿಗೆ ನಿತ್ಯ ಕೆನೆಭರಿತ ಹಾಲು ನೀಡುವ ಕ್ಷೀರಧಾರೆ ಯೋಜನೆಯನ್ನು ಜಾರಿಗೆ ನೀಡಿತ್ತು. ನಮ್ಮ ಈ ಯೋಜನೆ ಜಾರಿಯಾಗಿ ಇಂದಿಗೆ ಹತ್ತು ವರ್ಷಗಳು ತುಂಬಿದೆ. ಪ್ರತಿನಿತ್ಯ ಒಂದು ಕೋಟಿಗೂ ಅಧಿಕ ಮಕ್ಕಳಿಗೆ ಹಾಲು ನೀಡುವ ಮೂಲಕ ಅವರ ಶೈಕ್ಷಣಿಕ ಸಾಧನೆಗೆ ನೆರವಾದ ಸಂತೃಪ್ತಿ ನನ್ನದು. ವಿಶ್ವ ಡೇರಿ ಫೆಡರೇಷನ್‌ನಿಂದ ನೀಡಲಾಗುವ “ಅಂತಾರಾಷ್ಟ್ರೀಯ ಅತ್ಯುತ್ತಮ ಯೋಜನೆ ಪ್ರಶಸ್ತಿ – 2022” ಅನ್ನು ನಮ್ಮ ಈ ಯೋಜನೆ ಪಡೆದಿದ್ದು, ಯೋಜನೆಯನ್ನು ಜಾರಿಗೆ ಕೊಟ್ಟ ನನಗಿದು ಹೆಮ್ಮೆಯುಂಟು ಮಾಡಿದೆ.ʼ ಎಂದಿದ್ದಾರೆ.

Previous article‘ನಂದಿನಿ’ ಉತ್ಪನ್ನಗಳಿಗೆ ನಟ ಶಿವರಾಜ್​ಕುಮಾರ್ ರಾಯಭಾರಿ
Next articleಜಿಲ್ಲೆಯನ್ನು ಮತ್ತೆ ಮೊದಲ ಸ್ಥಾನಕ್ಕೆ ತರಬೇಕು