ಬೆಂಗಳೂರು: ಕ್ಯಾನ್ಸರ್ ಪೀಡಿತ ಪುಟಾಣಿ ಅಭಿಮಾನಿಯನ್ನು ಭೇಟಿಯಾಗುವ ಮೂಲಕ ನಾಯಕ ನಟ ಕಿಚ್ಚ ಸುದೀಪ್ ಆಕೆಯ ಆಸೆಯನ್ನು ಈಡೇರಿಸಿದ್ದಾರೆ.
ಬೆಂಗಳೂರಿನ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಕ್ಷಿ ಎಂಬ ಬಾಲಕಿ, ಕಿಚ್ಚ ಸುದೀಪ್ ಅವರ ಅಪ್ಪಟ ಅಭಿಮಾನಿ. ಕಳೆದ ಕೆಲ ದಿನಗಳಿಂದ ಸುದೀಪ್ ಅವರನ್ನು ಭೇಟಿ ಮಾಡಬೇಕೆಂಬ ಕನಸು ಕಂಡಿದ್ದಳು. ಬಾಲಕಿಯ ಈ ಆಸೆ ಸುದೀಪ್ ಅವರ ಗಮನಕ್ಕೂ ಬಂದಿತ್ತು. ತಡಮಾಡದೇ ಆಸ್ಪತ್ರೆಗೆ ಬಂದ ಸುದೀಪ್, ಬಾಲಕಿಯಿದ್ದ ಆಸ್ಪತ್ರೆಗೆ ಆಗಮಿಸಿ ಸಾಕ್ಷಿಯ ಆಸೆಯನ್ನು ಈಡೇರಿಸಿದ್ದಾರೆ. ಸದ್ಯ ಪಟಾಣಿಯನ್ನು ಭೇಟಿಯಾದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.